ನವದೆಹಲಿ :ಭಾರತೀಯ ನೌಕಾಪಡೆಯ ಮಿಗ್-29ಕೆ ಫೈಟರ್ ಜೆಟ್ ಗುರುವಾರ ಅರೇಬಿಯನ್ ಸಮುದ್ರದ ಮೇಲೆ ಅಪಘಾತಕ್ಕೀಡಾಯಿತು. ಘಟನೆಯಲ್ಲಿ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದು, ಕಳೆದ 40 ಗಂಟೆಗಳಿಂದಲೂ ಶೋಧ ಕಾರ್ಯ ನಡೆಯುತ್ತಿದೆ. ಮತ್ತೊಬ್ಬ ಪೈಲಟ್ ಪತ್ತೆಯಾಗಿದ್ದು, ನೌಕಾಪಡೆ ತನಿಖೆಗೆ ಆದೇಶಿಸಿದೆ.
ನೌಕಾಪಡೆಯ ಪಿ-8ಐ ವಿಮಾನ ಮತ್ತು ಭಾರತೀಯ ವಾಯುಪಡೆಯ ಸಿ-130 ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳು ಶೋಧ ಕಾರ್ಯ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.