ತಮಿಳುನಾಡು: ರಾಮೇಶ್ವರಂ ದ್ವೀಪ ಪ್ರದೇಶದಲ್ಲಿ ಸೂರ್ಯ ಉದಯಿಸುವ ವೇಳೆ ಸೀರೆಯುಟ್ಟ ನಾರಿಯರು ಸಮುದ್ರದ ಆಳಕ್ಕೆ ಇಳಿಯುತ್ತಾರೆ. ಅಲೆಗಳ ಸದ್ದು, ಉಬ್ಬರವಿಳಿತದ ಬಗ್ಗೆಯೂ ಇವರಿಗೆ ಭಯವೇ ಇಲ್ಲ. ಯಾಕಂದ್ರೆ, ದ್ವೀಪಗಳ ದಡದ ಬಂಡೆಗಳ ಮೇಲೆ ಬೆಳೆಯುವ ಕಡಲ ಕಳೆಯನ್ನು ಸಂಗ್ರಹಿಸುವುದೇ ಇವರ ದೈನಂದಿನ ಕಾಯಕ.
ಗಂಟೆಗಳ ಕಾಲ ಉಪ್ಪು ನೀರಿನಲ್ಲಿ ಉಳಿದು ಸಮುದ್ರ ಕಳೆಗಳನ್ನು ಸಂಗ್ರಹಿಸಿ, ಇವರು ಜೀವನ ನಡೆಸುತ್ತಾರೆ. ಸಮುದ್ರದ ಕಳೆ ಸಂಗ್ರಹಿಸುವುದು ಸುಲಭದ ಮಾತಲ್ಲ. ಯಾಕಂದ್ರೆ ದೀರ್ಘಕಾಲದವರೆಗೆ ನೀರಿನೊಳಗೆ ಇರಬೇಕಾಗುತ್ತದೆ.
ಪ್ರವಾಸೋದ್ಯಮ ಮತ್ತು ಮೀನುಗಾರಿಕೆಯ ಜೊತೆಗೆ ಕಡಲ ಕಳೆ ಸಂಗ್ರಹವು, ವಿಶೇಷವಾಗಿ ಮಹಿಳೆಯರಿಗೆ ಲಾಭದಾಯಕ ಉದ್ಯೋಗ ನೀಡುತ್ತಿದೆ. ಮುಖ್ಯ ಅಂದ್ರೆ ಕಡಲ ಕಳೆ ಸಂಗ್ರಹದಲ್ಲಿ 60 ವರ್ಷಗಳಿಂದಲೂ ಕೆಲವರು ತೊಡಗಿಸಿಕೊಂಡಿದ್ದಾರೆ.
ಕಡಲ ಕಳೆ' ಸಂಗ್ರಹಕ್ಕಾಗಿ ಸಮುದ್ರದಾಳಕ್ಕೆ ಇಳಿಯುವ ನಾರಿಯರು ಸೌಂದರ್ಯ ವರ್ಧಕಗಳಲ್ಲಿ ಕಡಲ ಕಳೆಯು ಒಂದು ಪ್ರಮುಖ ಅಂಶ. ಆದ್ದರಿಂದ ವರ್ಷದುದ್ದಕ್ಕೂ ಇದು ಹೆಚ್ಚಿನ ಬೇಡಿಕೆ ಹೊಂದಿರುತ್ತದೆ. ಆದರೂ ಈ ಮಹಿಳೆಯರು ಆ ಉತ್ಪನ್ನಗಳನ್ನು ವಿರಳವಾಗಿ ಬಳಸುತ್ತಾರೆ.
ಹೀಗೆ ಸಂಗ್ರಹಿಸಿದ ಸಮುದ್ರದ ಕಳೆಗಳನ್ನು ತೀರದಲ್ಲಿ ಒಣಗಿಸಿ ಸಂಸ್ಕರಿಸಿದ ನಂತರ ಅದನ್ನು ಕೆಜಿಗೆ 50 ರೂ.ಗೆ ಮಾರಾಟ ಮಾಡಲಾಗುತ್ತದೆ. ಕಠಿಣ ಪರಿಶ್ರಮದಿಂದ ಒಂದು ದಿನಕ್ಕೆ ಅವರು 500 ರಿಂದ 600 ರೂ. ಸಂಪಾದಿಸುತ್ತಾರೆ ಅಷ್ಟೇ. ಈ ಕೆಲಸ ಸುಲಭ ಅಲ್ಲ. ಆದರೆ, ಇಲ್ಲಿನ ಹೆಣ್ಣು ಮಕ್ಕಳಿಗೆ ಹೊಟ್ಟೆ ಪಾಡಿಗಾಗಿ ಇದು ಅನಿವಾರ್ಯವಾಗಿದೆ.