ನವದೆಹಲಿ:26/11ರ ದುರ್ಘಟನೆ ಪುನರಾವರ್ತನೆಯಾಗದಂತೆ ಭಾರತೀಯ ನೌಕಾಪಡೆ ಮುಂಜಾಗೃತೆ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
26/11ರಂತಹ ದಾಳಿ ಮತ್ತೆ ನಡೆಯಲು ಬಿಡೋಲ್ಲ: ರಾಜನಾಥ್ ಸಿಂಗ್ - ರಾಜನಾಥ್ ಸಿಂಗ್ ಲೇಟೆಸ್ಟ್ ಸುದ್ದಿ
ಭಾರತೀಯ ನೌಕಾಪಡೆ ಸಮುದ್ರ ಮಾರ್ಗಗಳ ಬಗ್ಗೆ ತೀವ್ರ ನಿಗಾ ವಹಿಸಿದೆ. ಹೀಗಾಗಿ 26/11 ರ ಮುಂಬೈ ದಾಳಿಯಂತಹ ದುರ್ಘಟನೆ ಪುನರಾವರ್ತನೆಯಾಗದಂತೆ ಮುಂಜಾಗೃತೆ ವಹಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ರಾಜನಾಥ್ ಸಿಂಗ್
ನಗರದಲ್ಲಿ ನಡೆದ ನೌಕಾ ಕಮಾಂಡರ್ಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತ ಎಂದಿಗೂ ಆಕ್ರಮಣಕಾರಿ ದೇಶವಲ್ಲ. ಈವರೆಗೂ ಭಾರತ ಯಾವ ದೇಶದ ಮೇಲೂ ಅಟ್ಯಾಕ್ ಮಾಡಿಲ್ಲ. ಆದರೆ ನಮ್ಮ ಮೇಲೆ ಕೆಂಗಣ್ಣು ಬೀರುವವರಿಗೆ ತಕ್ಕ ಪಾಠ ಕಲಿಸಲು ನಾವು ಸಮರ್ಥರಿದ್ದೇವೆ ಎಂದರು.
ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಆಂತರಿಕವಾಗಿ ನಿರ್ಮಿಸಲಾದ ಬಿಡಿಭಾಗಗಳನ್ನೇ ಹೆಚ್ಚು ಬಳಸಲಾಗುತ್ತಿದೆ. ಈ ಬಗ್ಗೆ ಕೇಳಿದಾಗ ನನಗೆ ಅತೀವ ಹೆಮ್ಮೆಯೆನಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.