ಉತ್ತರಕಾಶಿ :ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇಲ್ಲಿನ ಬಾರ್ಕೋಟ್ ಪಟ್ಟಣದಲ್ಲಿ ಸಿಲುಕಿದ್ದ 12 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ರಕ್ಷಿಸಿದೆ.
ರಾಜ್ಯದ ಅನೇಕ ಪ್ರದೇಶಗಳಲ್ಲಿ ರಸ್ತೆ ಮಾರ್ಗಗಳು ಹಿಮಾವೃತವಾದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಮೂರ್ನಾಲ್ಕು ವಾಹನಗಳಲ್ಲಿದ್ದ 12 ಜನರು ಉತ್ತರಕಾಶಿ ಜಿಲ್ಲೆಯ ಬಾರ್ಕೋಟ್ ಪಟ್ಟಣದಲ್ಲಿ ಸಿಲುಕಿದ್ದರು.