ಅಹಮದಾಬಾದ್(ಗುಜರಾತ್):ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಗಲಭೆ ಉಂಟಾಗಿದ್ದು, ಕಾರ್ಯಕರ್ತರು ಮಾರಾಮಾರಿ ನಡೆಸಿದ್ದಾರೆ.
ಕಾರ್ಯಕ್ರಮದ ವೇಳೆ ಕೆಲವರು ಹಾರ್ದಿಕ್ ಪಟೇಲ್ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಹಾರ್ದಿಕ್ ಬೆಂಬಲಿಗರು ರೊಚ್ಚಿಗೆದ್ದಿದ್ದು, ಘೋಷಣೆ ಕೂಗಿದವರನ್ನ ಮನಬಂದಂತೆ ಥಳಿಸಿದ್ದಾರೆ. ಹೀಗಾಗಿ 10ರಿಂದ 15 ನಿಮಿಷಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾರ್ದಿಕ್ ಪಟೇಲ್ ಬೆಂಬಲಿಗರು ಕೆಲಕಾಲ ಪ್ರಧಾನಿ ಮೋದಿ ವಿರುದ್ಧ ಘೋಷಣೆಯನ್ನೂ ಕೂಗಿದ್ದಾರೆ.