ಕರ್ನಾಟಕ

karnataka

ETV Bharat / bharat

370ನೇ ವಿಧಿ ಕುರಿತ ವಿಚಾರ ಸಂಕಿರಣ.. ಎಐಎಸ್‌ಎ - ಎಬಿವಿಪಿ ನಡುವೆ ಘರ್ಷಣೆ - ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಜೆಎನ್​ಯು ಕ್ಯಾಂಪಸ್​ನಲ್ಲಿ 370ನೇ ವಿಧಿ ಕುರಿತು ಚರ್ಚೆ ನಡೆಸುವಾಗ ಎಐಎಸ್‌ಎ ಮತ್ತು ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ನಡುವೆ ಗಲಾಟೆ ಸಂಭವಿಸಿದೆ.

ಎಐಎಸ್‌ಎ-ಎಬಿವಿಪಿ ನಡುವೆ ಘರ್ಷಣೆ

By

Published : Oct 4, 2019, 9:10 AM IST

ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಗುರುವಾರ 370ನೇ ವಿಧಿ ಕುರಿತು ವಿಚಾರ ಸಂಕಿರಣ ಆಯೋಜನೆ ಮಾಡಲಾಗಿತ್ತು, ಈ ವೇಳೆ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರ ನಡುವೆ ಘರ್ಷಣೆ ಸಂಭವಿಸಿದೆ.

ಎಐಎಸ್‌ಎ-ಎಬಿವಿಪಿ ನಡುವೆ ಘರ್ಷಣೆ

ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ವಿಚಾರ ಸಂಕಿರಣ ನಡೆಸಲಾಗುತ್ತಿತ್ತು. ಆದ್ರೆ, ಎಡ ಪಂತೀಯ ವಿದ್ಯಾರ್ಥಿ ಸಂಘಟನೆ ಈ ವಿಚಾರ ಸಂಕಿರಣವನ್ನ ವಿರೋಧಿಸಿ ಪ್ರತಿಭಟನೆ ನಡೆಸಿತು. ಈ ವೇಳೆ, ಎಐಎಸ್‌ಎ ಮತ್ತು ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ತಳ್ಳಾಟ ನೂಕಾಟ ನಡೆದಿದೆ.

ಈ ಬಗ್ಗೆ ಮಾತನಾಡಿರುವ ಎಬಿವಿಪಿ ಸಂಘಟನೆ ನಾಯಕ ಸೌರಭ್ ಶರ್ಮಾ, ನಾವು 370ನೇ ವಿಧಿ ರದ್ದತಿಯ ಅನುಕೂಲಗಳನ್ನ ಕುರಿತು ಚರ್ಚೆ ಮಾಡುತ್ತಿದ್ದೆವು. ಆದರೆ, ಕೆಲವರು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details