ನವದೆಹಲಿ: ಶನಿವಾರವಷ್ಟೇ ನವದೆಹಲಿಯ ತೀಸ್ ಹಜಾರಿ ಕೋರ್ಟ್ ಬಳಿ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಸಂಭವಿಸಿ ದೇಶಾದ್ಯಮತ ಸುದ್ದಿಯಾಗಿತ್ತು. ಇದೀಗ ಅಂತದ್ದೇ ಘಟನೆ ಮತ್ತೆ ನಡೆದಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಕೀಲ, ಬೈಕ್ಗೆ ಹೆಲ್ಮೆಟ್ ಎಸೆದು ಆಕ್ರೋಶ: ವಿಡಿಯೋ - ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಿ ವಕೀಲ
ರ್ಕರ್‌ಡೂಮಾ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಕೀಲ
ನವದೆಹಲಿಯ ಆನಂದ್ ವಿಹಾರ್ ಬಳಿ ಇರುವ ಕರ್ಕರ್‌ಡೂಮಾ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಪೊಲೀಸ್ ಸಮವಸ್ತ್ರದಲ್ಲಿ ಬೈಕ್ ಮೇಲೆ ಕುಳಿತಿರುವ ಸಿಬ್ಬಂದಿ ಮೇಲೆ ವಕೀಲರೊಬ್ಬರು ಮನ ಬಂದಂತೆ ತಳಿಸಿದ್ದಾರೆ. ಈ ವೇಳೆ ಬೈಕ್ ಮೇಲೆ ಕುಳಿತಿದ್ದ ಪೊಲೀಸ್ ಸಿಬ್ಬಂದಿ ಏನೊಂದು ಮಾತನಾಡದೆ ಸ್ಥಳದಿಂದ ತೆರಳಿದ್ದಾರೆ.