ಆಗ್ರಾ:ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಹಿರಿಯ ಪತ್ರಕರ್ತರೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಗ್ರಾದಲ್ಲಿ ಈವರೆಗೆ ಒಟ್ಟು 678 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 22 ಜನ ಕೋವಿಡ್-19 ವೈರಸ್ ತಗುಲಿ ಪ್ರಾಣಬಿಟ್ಟಿದ್ದಾರೆ.
ಆಗ್ರಾದಲ್ಲಿ ಕೊರೊನಾ ಸೋಂಕಿಗೆ ಹಿರಿಯ ಪತ್ರಕರ್ತ ಬಲಿ - ಪತ್ರಕರ್ತ
ಆಗ್ರಾದಲ್ಲಿ ಹಿರಿಯ ಪತ್ರಕರ್ತರೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಆಗ್ರಾ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 22 ಕ್ಕೇರಿದೆ.
ಆಗ್ರಾದಲ್ಲಿ ಕೊರೊನಾ ಸೋಂಕಿಗೆ ಹಿರಿಯ ಪತ್ರಕರ್ತ ಬಲಿ
ಕೊರೊನಾ ಸೋಂಕು ತಗುಲಿದ್ದ ಪತ್ರಕರ್ತನನ್ನು ಎಸ್.ಎನ್. ವೈದ್ಯಕೀಯ ಕಾಲೇಜಿನಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್. ಸಿಂಗ್ ತಿಳಿಸಿದ್ದಾರೆ.
ರಾಜ್ಯದ ಮಾನ್ಯತೆ ಪಡೆದ ವರದಿಗಾರರ ಸಮಿತಿಯು ಮೃತ ಪತ್ರಕರ್ತನ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ಮತ್ತು ಅವರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದೇ ಪರಿಗಣಿಸಿ ಅವರಿಗೆ 50 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.