ಕರ್ನಾಟಕ

karnataka

ETV Bharat / bharat

ವೃಶ್ಚಿಕ ರಾಶಿಯವರ ಹಣಕಾಸಿನ ಸ್ಥಿತಿಗತಿ 2020 ರಲ್ಲಿ ಹೇಗಿರಲಿದೆ...?

ಈ ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಬಹುದು, ಆದರೆ ನೀವು ಅನಗತ್ಯ ಖರ್ಚುಗಳನ್ನು ನಿಯಂತ್ರಿಸದಿದ್ದಲ್ಲಿ, ಇತರರಿಂದ ಹಣಕಾಸು ನೆರವು ಕೇಳಬೇಕಾಗಬಹುದು. ನಿಮ್ಮ ಆದಾಯದಲ್ಲಿನ ಅಸ್ಥಿರತೆಯಿಂದಾಗಿ, ನಿಮ್ಮ ಹಣಕಾಸನ್ನು ಮುಂಚಿತವಾಗಿ ಯೋಜಿಸಬೇಕು.

2020 ವೃಶ್ಚಿಕ ರಾಶಿ ಭವಿಷ್ಯ
Scorpio 2020 horoscope

By

Published : Jan 8, 2020, 5:15 AM IST

ಈ ವರ್ಷ ನೀವು ಬಾಕಿಯಿರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಇದು ನಿಮಗೆ ಹೊಸ ನಿರ್ದೇಶನವನ್ನೂ ನೀಡುತ್ತದೆ. ನಿಮ್ಮ ಸುತ್ತಲಿರುವ ಜನರೊಂದಿಗಿನ ನಿಮ್ಮ ಸಂವಹನವು ಕಡಿಮೆಯಾಗಬಹುದು. ಆದರೂ ಫೆಬ್ರವರಿ ಬಳಿಕ ನೀವು ಹೊಸ ಜನರನ್ನು ಭೇಟಿಯಾಗಬಹುದು ಮತ್ತು ಅವರೊಂದಿಗೆ ಸೂಕ್ಷ್ಮ ಪರಿಜ್ಞಾನದ ಮತ್ತು ಅರ್ಥಪೂರ್ಣ ಚರ್ಚೆಯನ್ನು ಹೊಂದಬಹುದು. ನೀವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಬಹುದು. ನಿಮ್ಮ ಮಾತುಗಳನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ತಪ್ಪಿಸಲು ನಿಮ್ಮ ಸಂವಹನದಲ್ಲಿ ಸ್ಪಷ್ಟತೆಯನ್ನು ಹೊಂದುವಂತೆ ನಿಮಗೆ ಸಲಹೆ ನೀಡಲಾಗುತ್ತದೆ.

ನೀವು ದುಬಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಋಣಾತ್ಮಕ ಯೋಚನೆಗಳನ್ನು ಬಿಟ್ಟು ಬೆಳಕಿನ ದಿಕ್ಕಿನಲ್ಲಿ ಸಾಗುವಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ದುಬಾರಿ ಹವ್ಯಾಸಗಳನ್ನು ಪೂರೈಸುವಲ್ಲಿ ನೀವು ಕೊರತೆ ಮಾಡುವುದಿಲ್ಲ. ಆದರೆ ನಿಮ್ಮ ಆದಾಯದ ಮೂಲವನ್ನು ಮನಸ್ಸಲ್ಲಿ ಇಟ್ಟುಕೊಂಡು ಖರ್ಚು ಮಾಡಬೇಕು. ನಿಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುವಿರಿ. ನೀವು ಪಾಲುದಾರಿಕೆ ವ್ಯವಹಾರ ಹೊಂದಿದ್ದಲ್ಲಿ, ಈ ವರ್ಷದ ಕೊನೆಯ ಮೂರು ತಿಂಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ವರ್ಷ ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳಿಗೆ ಅದೃಷ್ಟರಾಗಿರುತ್ತೀರಿ. ಪ್ರೀತಿಪಾತ್ರರು ನಿಮ್ಮ ವೃತ್ತಿ ಜೀವನದಲ್ಲೂ ನಿಮಗೆ ಅದ್ಭುತ ಸಹಕಾರವನ್ನು ನೀಡಬಹುದು. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಉತ್ತಮ ಹೊಂದಾಣಿಕೆ ಮತ್ತು ಬಾಂಧವ್ಯ ಉಂಟಾಗಬಹುದು.

ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯು ನಿಮ್ಮ ಪ್ರೀತಿ ಜೀವನಕ್ಕೆ ಉತ್ತಮವಾಗಿರುತ್ತದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಬಹುದು, ಆದರೆ ನೀವು ಅನಗತ್ಯ ಖರ್ಚುಗಳನ್ನು ನಿಯಂತ್ರಿಸದಿದ್ದಲ್ಲಿ, ಇತರರಿಂದ ಹಣಕಾಸು ನೆರವು ಕೇಳಬೇಕಾಗಬಹುದು. ನಿಮ್ಮ ಆದಾಯದಲ್ಲಿನ ಅಸ್ಥಿರತೆಯಿಂದಾಗಿ, ನಿಮ್ಮ ಹಣಕಾಸನ್ನು ಮುಂಚಿತವಾಗಿ ಯೋಜಿಸಬೇಕು. ವಿದ್ಯಾರ್ಥಿಗಳಿಗೆ ಈ ವರ್ಷವು ಧನಾತ್ಮಕವಾಗಿರುತ್ತದೆ. ಆದರೂ ವೃತ್ತಿಪಥವನ್ನು ಆರಿಸುವಾಗ, ಅವರು ಪರಿಣಿತರ ಸಲಹೆ ಪಡೆಯಬೇಕು. ವಿದ್ಯಾರ್ಥಿಯಾಗಿ, ಸೆಪ್ಟೆಂಬರ್ ಬಳಿಕ ನಿಮ್ಮ ಓದಿನಲ್ಲಿ ತೊಂದರೆ ಎದುರಿಸಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ಮೂಗು, ಕಿವಿ ಮತ್ತು ಗಂಟಲಿನ ತೊಂದರೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ.

ABOUT THE AUTHOR

...view details