ಕರ್ನಾಟಕ

karnataka

ETV Bharat / bharat

ಕೋವಿಡ್​​ ನಿಗ್ರಹಕ್ಕೆ 'ಎಸ್‌ಎಆರ್‌ಎಸ್-ಕೊವಿ -2' ಜೀನೋಮಿಕ್ ಅನುಕ್ರಮಗಳ ಅಧ್ಯಯನ

ಕೋಲ್ಕತ್ತಾದ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇಂದ್ರಜಿತ್ ಸಹಾ ಮತ್ತು ಅವರ ತಂಡದಿಂದ ಆನ್‌ಲೈನ್‌ನಲ್ಲಿ ವೈರಸ್‌ಗಳ ಅನುಕ್ರಮವನ್ನು ಊಹಿಸಲು ವೆಬ್ ಆಧಾರಿತ COVID-19 'ಪ್ರಿಡಿಕ್ಟರ್' ಅಭಿವೃದ್ಧಿಪಡಿಸಲಾಗಿದೆ.

By

Published : Sep 14, 2020, 7:54 AM IST

'ಎಸ್‌ಎಆರ್‌ಎಸ್-ಕೊವಿ -2' ಜೀನೋಮಿಕ್ ಅನುಕ್ರಮ
'ಎಸ್‌ಎಆರ್‌ಎಸ್-ಕೊವಿ -2' ಜೀನೋಮಿಕ್ ಅನುಕ್ರಮ

ನವದೆಹಲಿ:ದೇಶದ ವಿಜ್ಞಾನಿಗಳ ತಂಡವೊಂದು ಕೋವಿಡ್​-19ಗೆ ಔಷಧಿ ಕಂಡುಹಿಡಿಯಲು ಸಹಾಯ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೆ, ಭಾರತ ಸೇರಿದಂತೆ ವಿಶ್ವದಾದ್ಯಂತ ಎಸ್‌ಎಆರ್‌ಎಸ್-ಕೊವಿ -2(SARS-CoV-2)ನ ಜೀನೋಮಿಕ್ ಅನುಕ್ರಮಗಳಲ್ಲಿ ಕೆಲಸ ಮಾಡುತ್ತಿದೆ. ಈ ಮೂಲಕ​ ವೈರಸ್​ನಿಂದ ಮಾನವನ ದೇಹದ ಅನುವಂಶಿಕ ವ್ಯತ್ಯಾಸಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಈ ಅಧ್ಯಯನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಅಧೀನದಲ್ಲಿರುವ ಶಾಸನಬದ್ಧ ಸಂಸ್ಥೆಯಾದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ) ಪ್ರಾಯೋಜಿಸಿದೆ.

ಕೋಲ್ಕತ್ತಾದ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇಂದ್ರಜಿತ್ ಸಹಾ ಮತ್ತು ಅವರ ತಂಡದಿಂದ ಈ ಕಾರ್ಯ ನಡೆಸಲಾಗಿದೆ. ಇದರಲ್ಲಿ ಆನ್‌ಲೈನ್‌ನಲ್ಲಿ ವೈರಸ್‌ಗಳ ಅನುಕ್ರಮವನ್ನು ಊಹಿಸಲು ವೆಬ್ ಆಧಾರಿತ COVID-19 'ಪ್ರಿಡಿಕ್ಟರ್' ಅಭಿವೃದ್ಧಿಪಡಿಸಲಾಗಿದೆ.

ಈ ಸಂಶೋಧನೆಯನ್ನು ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಅನುಕ್ರಮಗಳಿಗೆ ವಿಸ್ತರಿಸಲಾಗಿದೆ. ಭಾರತ ಒಳಗೊಂಡಂತೆ ಜಾಗತಿಕವಾಗಿ 20260, 18997 ಮತ್ತು 3514 ರೂಪಾಂತರದ ಬಿಂದುಗಳನ್ನು ಕಂಡುಹಿಡಿದಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತ ಸೇರಿದಂತೆ ವಿಶ್ವದಾದ್ಯಂತದ ಎಸ್‌ಎಆರ್‌ಎಸ್-ಕೊವಿ -2 ಜೀನೋಮ್‌ಗಳಲ್ಲಿನ ಅನುವಂಶಿಕ ವ್ಯತ್ಯಾಸವನ್ನು ಗುರುತಿಸಲು ವಿಜ್ಞಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಂಗಲ್ ನ್ಯೂಕ್ಲಿಯೊಟೈಡ್ ಪಾಲಿಮಾರ್ಫಿಸ್ಮ್ (ಎಸ್‌ಎನ್‌ಪಿ) ಬಳಸಿ ವೈರಸ್ ತಳಿಗಳ ಸಂಖ್ಯೆ ಗುರುತಿಸಲಾಗುತ್ತದೆ. ಅನುವಂಶಿಕ ವ್ಯತ್ಯಯದ ಜ್ಞಾನವನ್ನು ಸಂಯೋಜಿಸುವುದು, ಹೆಚ್ಚು ಇಮ್ಯುನೊಜೆನಿಕ್ ಮತ್ತು ಆಂಟಿಜೆನಿಕ್ ಹೊಂದಿರುವ ಸಂರಕ್ಷಿತ ಜೀನೋಮಿಕ್ ಪ್ರದೇಶಗಳ ಆಧಾರದ ಮೇಲೆ ಸಂಶ್ಲೇಷಿತ ಲಸಿಕೆಯ ಅಧ್ಯಯನಕ್ಕಾಗಿ ಅಭ್ಯರ್ಥಿಗಳನ್ನು ಗುರುತಿಸಲಾಗುತ್ತದೆ.

ABOUT THE AUTHOR

...view details