ಹೈದರಾಬಾದ್: ವಿಶ್ವವೇ ಕೋವಿಡ್19ಕ್ಕೆ ಲಸಿಕೆಯೊಂದನ್ನು ಎದುರು ನೋಡುತ್ತಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಈ ರೋಗ ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ಆವರಿಸಿದೆ.
ಈ ಸವಾಲಿನ ನಡುವೆಯೇ ಹೊಸ ಪ್ರಸ್ತಾಪವೊಂದು ಗರಿಗೆದರುತ್ತಿದೆ. ಸ್ವಯಂ ಸೇವಕರಿಗೆ ಪ್ರಯೋಗಗಾತ್ಮಕ ಲಸಿಕೆಯೊಂದನ್ನು ನೀಡಿ ಅವರನ್ನು ಸೋಂಕಿಗೊಳಪಡಿಸುವುದು. ಆದರೆ, ವಿಜ್ಞಾನಿಗಳು ಈ ಪ್ರಸ್ತಾಪದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ಲಸಿಕೆ ಆವಿಷ್ಕಾರವನ್ನು ಇನ್ನಷ್ಟು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ವಿಳಂಬಗೊಳಿಸಬಹುದು," ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಸಿಕೆ ಸಂಶೋಧನೆಯಲ್ಲಿ ಮಹತ್ವದ ಹೆಸರಾಗಿರುವ, ಪೆನ್ವಿಲ್ವಾನಿಯಾ ವಿಶ್ವವಿದ್ಯಾನಿಲಯದ ಸ್ಟಾನ್ಲಿ ಪ್ಲಾಟ್ಕಿನ್ ಸುರಕ್ಷಿತವಾಗಿ ವಿನ್ಯಾಸಗೊಳಿಸಲಾದ ಲಸಿಕೆಯ ಪ್ರಯೋಗ, ಈ ಲಸಿಕೆಯ ತ್ವರಿತ ಗತಿಯ ಆವಿಷ್ಕಾರಕ್ಕೆ ಕಾರಣವಾದೀತು. ಆದರೆ ಇಂತಹ ರೋಗವೊಂದರ ಕಾರಣಕ್ಕಾಗಿ ಭೀತಿಯಿಂದ, ಅಸಮಾನ್ಯ ಪ್ರಕ್ರಿಯೆಗೆ ಮುಂದಾದರೆ, ಅದು ಸಮಸ್ಯೆ ತಂದೊಡ್ಡೀತು. ನಮ್ಮ ಧೋರಣೆಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಿದೆ," ಎಂದು ಅವರು ತಿಳಿಸಿದ್ದಾರೆ.
ಇಂತಹ ಒಂದು ಕೊರೊನಾ ವೈರಸ್ ಕುರಿತ ಅಧ್ಯಯನ ಜರ್ನಲ್ ಆಫ್ ಇನ್ಫೆಕ್ಷಿಯಸ್ ಡೀಸೀಸ್‍ನ ಆನ್‍ಲೈನ್ ಟುಡೇಯಲ್ಲಿ ಪ್ರಕಟಗೊಂಡಿದೆ. ಕಳೆದ ಎರಡು ಶತಮಾನಗಳಿಂದ ಹ್ಯೂಮನ್ ಚಾಲೆಂಜ್ ಅಧ್ಯಯನಗಳು ನಡೆದಿವೆ. ಕೆಲವು ರೋಗಗಳಿಗೆ ಇಂದಿಗೂ ಕೂಡಾ ಅಧ್ಯಯನಗಳು ನಡೆಯುತ್ತಿವೆ.
ಎಡ್ವರ್ಡ್ ಜೆನ್ನೆರ್ 1796ರಷ್ಟು ಹಿಂದೆಯೆ, ಕೌಫಾಕ್ಸ್‍ನ್ನು 8 ವರ್ಷದ ಬಾಲಕನ ಮೇಲೆ ಪ್ರಯೋಗ ಮಾಡಿದ್ದರು ಹಾಗೂ ಸಿಡುಬಿನಿಂದ ಆ ಹುಡುಗನ್ನು ರಕ್ಷಿಸಿದ್ದರು. ಆದರೆ ಅವರು ಅನುಸರಿಸಿದ ನೀತಿ ಬಗ್ಗೆ ಕಳವಳ ವ್ಯಕ್ತವಾಗಿತ್ತು.
ಇಂದು ಇಂತಹ ಪ್ರಯೋಗಗಳು ಹಲವಾರು ನೈತಿಕ ಪರಿಶೀಲನೆಗೆ ಒಳಪಡುತ್ತಿವೆ. ಹೀಗಾಗಿ ಸಂಶೋಧಕರು ಈ ಕೊರೊನಾ ವೈರಸ್‍ಗೆ ಸ್ವಯಂ ಸೇವಕರನ್ನು ಪ್ರಯೋಗಾತ್ಮಕವಾಗಿ ಬಳಸಿಕೊಳ್ಳುತ್ತಿಲ್ಲ.
ಶೀತ ಜ್ವರಕ್ಕೆ ಮಾನವ ಪ್ರಯೋಗಾರ್ಥ ಪರೀಕ್ಷೆ ನಡೆಸುತ್ತಿರುವ ಅಮೆರಿಕದ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಆಲರ್ಜಿ ಹಾಗೂ ಇನ್ಫೆಕ್ಷಿಯಸ್ ಡಿಸೀಸ್‍ನ ರೋಗನಿರೋಧಕ ಶಕ್ತಿ ತಜ್ಞ ಮ್ಯಾಥ್ಯೂ ಮೆಮೊಲೆ ಪ್ರಕಾರ ಕೊರೊನಾ ವೈರಸ್ ಎಷ್ಟು ಹೊಸ ವೈರಸ್ ಎಂದರೆ, ಅದು ಹೇಗೆ ಮಾನವನನ್ನು ಅಷ್ಟು ನಿಶಕ್ತರನ್ನಾಗಿ ಮಾಡಿ ಕಾಯಿಲೆ ಉಂಟು ಮಾಡುತ್ತದೆ ಎಂದು ಅರಿಯುವುದೇ ಇನ್ನು ಕಷ್ಟವಾಗಿದೆ. ಜತೆಗೆ ಅದು ಯಾವ ಕಾರಣಕ್ಕಾಗಿ ಮನುಷ್ಯರನ್ನು ಸುದೀರ್ಘವಾಗಿ ನರಳುವಂತೆ ಮಾಡುತ್ತದೆ ಎನ್ನುವುದು ತಿಳಿಯುವುದು ನಿಜಕ್ಕೂ ಕಷ್ಟಕರ ಎನ್ನುತ್ತಾರೆ.
ನಾವು ಯಾರಿಗಾದರೂ ಒಂದು ವೈರಸ್ ಲಸಿಕೆ ನೀಡುತ್ತೇವೆ ಎಂದರೆ, ಅದು ಆತನಲ್ಲಿ ಹೇಗೆ ಕಾಯಿಲೆ ಉಂಟು ಮಾಡುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ. ಹಾಗಾದರೆ ಮಾತ್ರ ನಾವು ರಿಸ್ಕ್ ತೆಗೆದುಕೊಳ್ಳುವುದು ಸರಿ ಎನ್ನುವ ಮ್ಯಾಥ್ಯೂ ಅವರು ಅತಿ ಶೀಘ್ರದಲ್ಲಿ ಈ ವೈರಸ್‍ನ ವಿರುದ್ಧ ಲಸಿಕೆ ಪ್ರಯೋಗದ ಸಾಧ್ಯತೆಯನ್ನು ಪ್ರಶ್ನಿಸುತ್ತಾರೆ.
ಕಳೆದ 40 ವರ್ಷಗಳ ಕಾಲ ಸಂಶೋಧನೆ ನಡೆಸಿರುವ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕಾಲೇಜಿನ ಲಸಿಕೆ ಸಂಶೋಧಕಮೈರೋನ್ ಲೆವಿನ್ ಕೆಲ ತಜ್ಞರ ಕಳವಳವನ್ನು ಪ್ರಶ್ನಿಸುತ್ತಾರೆ. "ನಾವು ಈ ನಿಟ್ಟಿನಲ್ಲಿ ಅತಿ ವೇಗವಾಗಿ ಮುಂದುವರಿಯುತ್ತಿದ್ದೇವೆ," ಎನ್ನುತ್ತಾರೆ ಅವರು.