ಕರ್ನಾಟಕ

karnataka

ಕೊರೊನಾ ಬಿಕ್ಕಟ್ಟು: ಆನ್​ಲೈನ್​ ಮೂಲಕ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಒಲಿಂಪಿಯಾಡ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ನಿರ್ದೇಶಕ ಮಹಾಬೀರ್ ಸಿಂಗ್ ತಿಳಿಸಿದ್ದಾರೆ.

By

Published : Oct 26, 2020, 4:44 PM IST

Published : Oct 26, 2020, 4:44 PM IST

ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆ
ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆ

ಹೈದರಾಬಾದ್:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020-2021ರ ಒಲಿಂಪಿಯಾಡ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ನಿರ್ದೇಶಕ ಮಹಾಬೀರ್ ಸಿಂಗ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಪರೀಕ್ಷೆಗಳಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ರಿಮೋಟ್ ಪ್ರೊಕ್ಟರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ವಿಡಿಯೋ ರೆಕಾರ್ಡಿಂಗ್ ಮತ್ತು ಇತರ ವಿಭಿನ್ನ ಸಾಧನಗಳನ್ನು ಬಳಸಲಾಗುವುದು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಪ್ರತಿ ವಿಜೇತ ವಿದ್ಯಾರ್ಥಿಗಳಿಗೆ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ, ಪ್ರಶಸ್ತಿ ಮತ್ತು ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ಹೇಳಿದರು.

ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆಯ ಪ್ರಕಾರ, ವಿದ್ಯಾರ್ಥಿಗಳಿಗೆ ಅವರ ರೋಲ್ ಸಂಖ್ಯೆ, ಪರೀಕ್ಷೆಗಳ ಲಿಂಕ್, ಮಾರ್ಗಸೂಚಿಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಆ ಸಮಯದಲ್ಲಿ ನೋಂದಣಿ ಪ್ರಕ್ರಿಯೆಯನ್ನು ವೀಕ್ಷಿಸಬಹುದು.

2020 - 2021ರ ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ಪರೀಕ್ಷೆಗಳಿಗೆ ನೋಂದಾಯಿಸಲು ಶಾಲೆ ಮತ್ತು ವಿದ್ಯಾರ್ಥಿಗೆ ನೇರ ಲಿಂಕ್ ನೀಡಲಾಗಿದೆ.

ಶಾಲೆ- https://ors.sofworld.org/

ವಿದ್ಯಾರ್ಥಿಗಾಗಿ - https://ors.sofworld.org/studentregistration

ABOUT THE AUTHOR

...view details