ಜೈಪುರ (ರಾಜಸ್ಥಾನ): ಸತತ 10 ತಿಂಗಳ ಬಳಿಕ ರಾಜಸ್ಥಾನದಲ್ಲಿ ಫೆಬ್ರವರಿ 8 ರಿಂದ 6 ರಿಂದ 8 ನೇ ತರಗತಿಗಳು ಪುನಾರಂಭವಾಗಲಿವೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕೋವಿಡ್ ನಿಯಮ ಅನುಸರಿಸಿ ತರಗತಿ ಆರಂಭಿಸಲು ನಿರ್ಧರಿಸಿದ್ದು, ಪದವಿಪೂರ್ವ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ತರಗತಿ ಪ್ರಾರಂಭವಾಗಲಿವೆ. ಅಲ್ಲದೆ, ಸ್ವಿಮ್ಮಿಂಗ್ ಪೂಲ್, ಥಿಯೇಟರ್ ತೆರೆಯಲು ಕೂಡಾ ಅನುಮತಿ ನೀಡಲಾಗಿದೆ. ಮದುವೆ ಸಮಾರಂಭ ಸೇರಿ ಇತರೆ ಕಾರ್ಯಕ್ರಮಗಳಲ್ಲಿ 200 ಜನರು ಮಾತ್ರ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಅಪಾಯ ಇನ್ನೂ ಕಡಿಮೆಯಾಗಿಲ್ಲ. ಹಿಂದಿಗಿಂತಲೂ ನಾವೀಗ ಹೆಚ್ಚು ಜಾಗರೂಕರಾಗಿರಬೇಕು. ಎಲ್ಲರೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ಎಂದು ಸಿಎಂ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.