ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಫೆ.1ರಿಂದ ಶಾಲೆ ಪುನಾರಂಭ: ಮೇ.17ರಿಂದ ಎಸ್‌ಎಸ್‌ಸಿ ಪರೀಕ್ಷೆ

ತೆಲಂಗಾಣದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಫೆಬ್ರವರಿ 1 ರಿಂದ ಶಾಲೆಗಳು ತೆರೆಯಲಿವೆ. ಮಾಧ್ಯಮಿಕ ಶಾಲಾ ಪ್ರಮಾಣಪತ್ರ ಪರೀಕ್ಷೆಗಳು ಮೇ 17 ರಿಂದ 26 ರವರೆಗೆ ನಡೆಯಲಿವೆ.

school reopen
ಶಾಲೆ ಪುನಾರಂಭ

By

Published : Jan 24, 2021, 1:17 PM IST

Updated : Jan 24, 2021, 3:01 PM IST

ಹೈದರಾಬಾದ್:ಸುಮಾರು ಒಂದು ವರ್ಷದ ಅಂತರದ ನಂತರ, ತೆಲಂಗಾಣದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ (ಶೈಕ್ಷಣಿಕ ವರ್ಷ 2020-21) ಫೆಬ್ರವರಿ 1 ರಿಂದ ಶಾಲೆ ತೆರೆಯಲು ಸಿದ್ಧವಾಗಿದೆ. ಶಾಲೆಗಳು ಮೇ 26 ರವರೆಗೆ ಕಾರ್ಯನಿರ್ವಹಿಸಲಿವೆ.

ತೆಲಂಗಾಣ ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಈ ವಿಚಾರ ತಿಳಿಸಿದ್ದು, "ತೆಲಂಗಾಣದಲ್ಲಿ ಮಾಧ್ಯಮಿಕ ಶಾಲಾ ಪ್ರಮಾಣಪತ್ರ (ಎಸ್‌ಎಸ್‌ಸಿ) ಪರೀಕ್ಷೆಗಳು ಮೇ 17 ರಿಂದ 26 ರವರೆಗೆ ನಡೆಯಲಿವೆ. ಸಂಬಂಧಿತ ಪರೀಕ್ಷೆಯನ್ನು ಬರೆಯಲು ಸಿದ್ಧರಿರುವ ಪ್ರತಿ ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಲೆಕ್ಕಿಸದೆ, ಪರೀಕ್ಷೆ ಬರೆಯಲು ಅನುಮತಿಸಲಾಗುವುದು" ಎಂದು ಹೇಳಿದೆ.

ಇದನ್ನೂ ಓದಿ: ಎಫ್​​​ಡಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ

ಹೈದರಾಬಾದ್ ಮತ್ತು ಸಿಕಂದರಾಬಾದ್‌ನಲ್ಲಿ ಬೆಳಿಗ್ಗೆ 8.45 ರಿಂದ ಸಂಜೆ 4 ರವರೆಗೆ ತರಗತಿಗಳು ನಡೆಯಲಿವೆ. ಉಳಿದ ಜಿಲ್ಲೆಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4.45 ರವರೆಗೆ ಶಾಲೆಗಳು ಕಾರ್ಯನಿರ್ವಹಿಸಲಿದೆ. 10ನೇ ತರಗತಿಯ ಆನ್‌ಲೈನ್ ಮತ್ತು ಡಿಜಿಟಲ್ ತರಗತಿಗಳು ಬೆಳಿಗ್ಗೆ 10 ರಿಂದ 11 ರವರೆಗೆ ಮತ್ತು 9 ನೇ ತರಗತಿಗೆ ಸಂಜೆ 4 ರಿಂದ ಸಂಜೆ 5 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

Last Updated : Jan 24, 2021, 3:01 PM IST

ABOUT THE AUTHOR

...view details