ಚೆನ್ನೈ :ರಾಜ್ಯದಲ್ಲಿ ಕೋವಿಡ್ ಲಾಕ್‌ಡೌನ್ ಸಡಿಲಗೊಳಿಸುತ್ತಿರುವ ತಮಿಳುನಾಡು ಸರ್ಕಾರ ಇದೀಗ ನವೆಂಬರ್ 16ರಿಂದ ಶಾಲೆಗಳು (9ನೇ ತರಗತಿಯಿಂದ ಮೇಲ್ಪಟ್ಟು) ಹಾಗೂ ನ.10 ರಿಂದ ಕೊರೊನಾ ಮಾನದಂಡಗಳೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಇದಲ್ಲದೆ ಮೃಗಾಲಯಗಳು, ಮನರಂಜನಾ ಉದ್ಯಾನವನಗಳು, ವಸ್ತು ಸಂಗ್ರಹಾಲಯಗಳನ್ನು ಸಹ ನ.10ರಿಂದ, ನ.16 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುವುದು ಹಾಗೂ ಸಾಂಸ್ಕೃತಿಕ ಕೂಟಗಳಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.