ಚಂಡೀಗಢ:ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಶಾಲಾ - ಕಾಲೇಜು ಬಂದ್ ಆಗಿವೆ. ಆದರೆ, ಪಂಜಾಬ್ನಲ್ಲಿ ಬರುವ ಸೋಮವಾರದಿಂದ 9ರಿಂದ 12ನೇ ತರಗತಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ.
ಸೋಮವಾರದಿಂದ 9-12ನೇ ತರಗತಿ ಶಾಲೆ ಆರಂಭ: ಪಂಜಾಬ್ ಸರ್ಕಾರದಿಂದ ನಿರ್ಧಾರ!
ಸೋಮವಾರದಿಂದ ಪಂಜಾಬ್ನಲ್ಲಿ 9 ರಿಂದ 12ನೇ ತರಗತಿ ಶಾಲಾ - ಕಾಲೇಜು ಆರಂಭಗೊಳ್ಳಲಿದ್ದು, ಅದಕ್ಕಾಗಿ ಪಂಜಾಬ್ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ.
ಕಂಟೇನ್ಮೆಂಟ್ ವಲಯ ಹೊರತುಪಡಿಸಿ, ಸೋಮವಾರದಿಂದ ರಾಜ್ಯದಲ್ಲಿ ಶಾಲಾ - ಕಾಲೇಜ್ ಓಪನ್ ಆಗಲಿದ್ದು, ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇದೇ ವಿಷಯವಾಗಿ ಮಾತನಾಡಿರುವ ಶಿಕ್ಷಣ ಸಚಿವ ವಿಜಯ್ ಇಂದಿರಾ ಸಿಗ್ಲೆ, ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಶಾಲೆ ಓಪನ್ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದೆ. ಆ ಎಲ್ಲ ಮಾರ್ಗಸೂಚಿ ಫಾಲೋ ಮಾಡಿ ನಾವು ಶಾಲಾ - ಕಾಲೇಜ್ ಓಪನ್ ಮಾಡ್ತಿದ್ದೇವೆ ಎಂದಿದ್ದಾರೆ.
ಶಾಲೆ ಓಪನ್ ಆಗುತ್ತಿದ್ದಂತೆ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದಿದ್ದಾರೆ. ಕಳೆದ ಮಾರ್ಚ್ ತಿಂಗಳಿಂದಲೂ ದೇಶದಲ್ಲಿ ಶಾಲಾ - ಕಾಲೇಜ್ ಬಂದ್ ಆಗಿವೆ. ಇನ್ನು ಕರ್ನಾಟಕದಲ್ಲಿ ವಿದ್ಯಾಗಮ ಯೋಜನೆ ಜಾರಿತರಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಕಾರಣ ಬಂದ್ ಮಾಡಲಾಗಿದೆ.