ಕರ್ನಾಟಕ

karnataka

ETV Bharat / bharat

30 ಲಕ್ಷ ಬೀಜದ ಚೆಂಡುಗಳನ್ನು ನಿರ್ಮಿಸಿ ದಾಖಲೆ ಬರೆದ ವಿದ್ಯಾರ್ಥಿಗಳು - world record effort to make 30 lakh seed balls

72 ಗಂಟೆಗಳಲ್ಲಿ 30 ಲಕ್ಷ ಬೀಜದ ಚೆಂಡುಗಳನ್ನು ಮಾಡುವ ಮೂಲಕ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.

world record effort to make 30 lakh seed balls
ದಾಖಲೆ ಬರೆದ ತಮಿಳುನಾಡಿನ ವಿದ್ಯಾರ್ಥಿಗಳು

By

Published : Jan 22, 2020, 10:53 PM IST

ರಾಮನಾಥಪುರಂ (ತಮಿಳುನಾಡು) : 72 ಗಂಟೆಗಳಲ್ಲಿ 30 ಲಕ್ಷ ಬೀಜದ ಚೆಂಡುಗಳನ್ನು ಮಾಡುವ ಮೂಲಕ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.

ರಾಮನಾಥಪುರಂ ಬರ ಪೀಡಿತ ಜಿಲ್ಲೆಯಾಗಿರುವುದರಿಂದ ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಮಾರ್ಟಿನ್ ಚಾರಿಟಬಲ್ ಟ್ರಸ್ಟ್ ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ರಾಮನಾಥಪುರಂ ಜಿಲ್ಲಾಧಿಕಾರಿ ವೀರ ರಾಘವ ರಾವ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರದೀಪ್ ಕುಮಾರ್ ಉದ್ಘಾಟಿಸಿದರು.

ರಾಮನಾಥಪುರಂ ಜಿಲ್ಲೆಯ ಪಟ್ಟಿನಂಕಾಥನ್ ಬಳಿಯ ರಾಷ್ಟ್ರೀಯ ಶಾಲೆಯಲ್ಲಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 2,500 ವಿದ್ಯಾರ್ಥಿಗಳು 72 ಗಂಟೆಗಳಲ್ಲಿ 30 ಲಕ್ಷ ಬೀಜ ಚೆಂಡುಗಳನ್ನು ರಚಿಸಿದರು.

ಹಣ್ಣುಗಳನ್ನು ಹೊಂದಿರುವ ಮರಗಳಾದ ಪೇರಲ, ಕಸ್ಟರ್ಡ್ ಆ್ಯಪಲ್​​, ಮರ ಸೇಬು ಮತ್ತು ಇತರ ಸ್ಥಳೀಯ ಪ್ರಭೇದಗಳ ಬೆಳವಣಿಗೆಗೆ ಏಳು ರೀತಿಯ ಬೀಜಗಳ ಚೆಂಡುಗಳನ್ನು ತಯಾರಿಸಲಾಯಿತು. ಮೂರು ದಿನಗಳಲ್ಲಿ 30 ಲಕ್ಷ ಬೀಜದ ಚೆಂಡುಗಳನ್ನು ತಯಾರಿಸಿ ವಿಶ್ವ ದಾಖಲೆಯನ್ನು ರಚಿಸಿ ಎಲೈಟ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಏಷ್ಯನ್ ರೆಕಾರ್ಡ್ಸ್ ಅಕಾಡೆಮಿಗೆ ಪ್ರವೇಶಿಸುವ ಯೋಜನೆ ಇದಾಗಿತ್ತು.

ABOUT THE AUTHOR

...view details