ಕರ್ನಾಟಕ

karnataka

ETV Bharat / bharat

ಸರ್ಕಾರಿ ಶಾಲೆಗೆ ಹುತಾತ್ಮ ವೀರ ಯೋಧನ ಹೆಸರು: ಛತ್ತೀಸ್​ಗಢ ಸಿಎಂ ಘೋಷಣೆ! - ವೀರ ಯೋಧ ಗಣೇಶ್​​ ಕುಂಜಮ್​​

2011 ರಲ್ಲಿ ಭಾರತೀಯ ಸೈನ್ಯ ಸೇರಿದ ಗಣೇಶ್ ಕುಂಜಮ್​​ ತಿಂಗಳ ಹಿಂದೆ ಲಡಾಖ್​ನಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ್ದರು.

Bhupesh Baghel
Bhupesh Baghel

By

Published : Jun 18, 2020, 8:26 PM IST

ರಾಯ​ಪುರ(ಛತ್ತೀಸ್​ಗಢ): ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾಗಿರುವ ವೀರ ಯೋಧ ಗಣೇಶ್​​ ಕುಂಜಮ್​​ ಅವರ ಹೆಸರನ್ನ ಸರ್ಕಾರಿ ಶಾಲೆಗೆ ನಾಮಕರಣ ಮಾಡುವುದಾಗಿ ಛತ್ತೀಸ್​​​​​ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್​ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಹುತಾತ್ಮ ವೀರ ಯೋಧನ ಹೆಸರು

ಲಡಾಖ್​​ನ ಗಾಲ್ವನ್​ ಕಣಿವೆಯಲ್ಲಿ ಭಾರತ - ಚೀನಾ ನಡುವೆ ನಡೆದ ಕಾದಾಟದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಯೋಧ ಗಣೇಶ್​ ಕುಂಜಮ್​ ಸಹ ಮೃತರಾಗಿದ್ದು, ಅವರ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಕರೆ ತಂದು, ಅಂತ್ಯಕ್ರಿಯೆ ನಡೆಸಲಾಗಿದೆ.

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಭೂಪೇಶ್​ ಬಾಗೇಲ್​ ಈ ಮಾಹಿತಿ ನೀಡಿದ್ದು, ಸರ್ಕಾರಿ ಶಾಲೆಗೆ ಇವರ ಹೆಸರು ನಾಮಕರಣ ಮಾಡಲಾಗುವುದು ಎಂದಿದ್ದಾರೆ. ಜತೆಗೆ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿರುವ ಅವರು, ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. ರಾಯಪುರ್​​ದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ರಮನ್​ ಸಿಂಗ್​​ ಕೂಡ ಭಾಗಿಯಾಗಿದ್ದರು.

ABOUT THE AUTHOR

...view details