ಸ್ಪ್ಯಾನಿಷ್:ಮಕ್ಕಳಿಗೆ ಅಂಗ ರಚನೆ ಬಗ್ಗೆ ಪಾಠ ಮಾಡುವ ಉದ್ದೇಶದಿಂದ ಮಹಿಳಾ ಶಿಕ್ಷಕಿಯೋರ್ವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಿಪಡಿಸಿದ್ದು, ಇದೀಗ ಅವರ ಕೆಲವೊಂದು ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಅಂಗಾಂಗದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮಹಿಳಾ ಶಿಕ್ಷಕಿ ಮಾಡಿದ್ರು ಈ ಕೆಲಸ! - ಅಂಗ ರಚನಾಶಾಸ್ತ್ರದ ರೀತಿ ಬಟ್ಟೆ
ಮನುಷ್ಯನಲ್ಲಿನ ಅಂಗಗಳ ಬಗ್ಗೆ ಸುಲಭವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಶಿಕ್ಷಕಿಯೋರ್ವರು ಪಾಠ ಮಾಡಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
![ಅಂಗಾಂಗದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮಹಿಳಾ ಶಿಕ್ಷಕಿ ಮಾಡಿದ್ರು ಈ ಕೆಲಸ! School Teacher Wears Anatomy Bodysuit](https://etvbharatimages.akamaized.net/etvbharat/prod-images/768-512-5479941-thumbnail-3x2-wdfdfd.jpg)
43 ವರ್ಷದ ಸ್ಪ್ಯಾನಿಷ್ ಮಹಿಳಾ ಶಿಕ್ಷಕಿ ಕಳೆದ 15 ವರ್ಷಗಳಿಂದ ಮಕ್ಕಳಿಗೆ ವಿಜ್ಞಾನ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದು, ಇದೀಗ ಮಕ್ಕಳಿಗೆ ಮನುಷ್ಯದ ಅಂಗಾಂಗದ ಬಗ್ಗೆ ಸುಲಭವಾಗಿ ಅರ್ಥವಾಗುವ ಉದ್ದೇಶದಿಂದ ತಾವೇ ಅಂಗ ರಚನಾಶಾಸ್ತ್ರದ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಬಂದು ಮಕ್ಕಳಿಗೆ ಪಾಠ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ದೇಹದ ಅಂಗ ರಚನೆಗಳನ್ನ ಸುಲಭವಾಗಿ ಅರ್ಥ ಮಾಡಿಕೊಂಡಿದ್ದಾರಂತೆ.
ಇದೀಗ ಅವರು ಅಂಗರ ರಚನಾಶಾಸ್ತ್ರದ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಬಂದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 13,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಹಾಗೂ 66,000 ಲೈಕ್ಸ್ ಬಂದಿವೆ. ಜತೆಗೆ ಶಿಕ್ಷಕಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಶಿಕ್ಷಕಿ ವಿಜ್ಞಾನದ ಜತೆಗೆ ಇಂಗ್ಲಿಷ್, ಸ್ಪ್ಯಾನಿಶ್, ಸಾಮಾಜಿಕ ವಿಜ್ಞಾನ ವಿಷಯಗಳ ಕುರಿತು ಸಹ ಪಾಠ ಮಾಡುತ್ತಾರೆ.