ನವದೆಹಲಿ:ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಅಪರಾಧಿವೋರ್ವ ಸಲ್ಲಿಸಿದ್ದ ಬಿಡುಗಡೆಯ ವಿಶೇಷ ಅರ್ಜಿ (ಸ್ಪೆಷಲ್ ಲೀವ್ ಪಿಟಿಷನ್) ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
'ಬಾಲಾಪರಾಧಿಯಾಗಿದ್ದೆ' ಎಂದ ನಿರ್ಭಯಾ ಪ್ರಕರಣದ ಅಪರಾಧಿ ಅರ್ಜಿ ಸುಪ್ರೀಂನಿಂದ ವಜಾ - ನಿರ್ಭಯಾ ಅಪರಾಧಿಯ ಅರ್ಜಿ ವಜಾಗೊಳಿಸಿದ ಸುಪ್ರೀಂ
ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ, 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಬಿಡುಗಡೆಯ ವಿಶೇಷ ಅರ್ಜಿ (ಸ್ಪೆಷಲ್ ಲೀವ್ ಪಿಟಿಷನ್) ಅನ್ನು ನ್ಯಾ.ಆರ್ ಬಾನುಮತಿ, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಎ ಎಸ್ ಬೋಪಣ್ಣರನ್ನೊಳಗೊಂಡ ಪೀಠವು ವಜಾಗೊಳಿಸಿದೆ.
ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ, 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ 'ಸ್ಪೆಷಲ್ ಲೀವ್ ಪಿಟಿಷನ್' (SLP) ಸಲ್ಲಿಸಿದ್ದ. ನ್ಯಾ. ಆರ್ ಬಾನುಮತಿ, ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ. ಎ. ಎಸ್. ಬೋಪಣ್ಣ ಅವರನ್ನೊಳಗೊಂಡ ಪೀಠವು ಇಂದು ಅರ್ಜಿಯ ವಿಚಾರಣೆ ನಡೆಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ಇನ್ನು, ಪ್ರಕರಣದ ಅಪರಾಧಿಗಳಾದ ವಿನಯ್ ಶರ್ಮಾ(26), ಮುಖೇಶ್ ಕುಮಾರ್ (32), ಅಕ್ಷಯ್ ಕುಮಾರ್ ಸಿಂಗ್ (31) ಹಾಗೂ ಪವನ್ ಗುಪ್ತಾ (25)ಗೆ ದೆಹಲಿ ಕೋರ್ಟ್ ನಿಂದ ಹೊಸದಾಗಿ ಡೆತ್ ವಾರೆಂಟ್ ನೀಡಲಾಗಿದ್ದು, ಫೆ.1 ರಂದು ಗಲ್ಲು ಶಿಕ್ಷೆ ನಿಗದಿಯಾಗಿದೆ.