ಕರ್ನಾಟಕ

karnataka

ETV Bharat / bharat

ಕಾಶ್ಮೀರ ವಿಚಾರ: ಅರ್ಜಿಗಳ ಕುರಿತು ಶೀಘ್ರದಲ್ಲೇ ಸುಪ್ರೀಂನಿಂದ ತೀರ್ಪು

370 ನೇ ವಿಧೇಯಕದ ನಿಬಂಧನೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರು ಸಲ್ಲಿಸಿದ್ದ ಸರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶೀಘ್ರದಲ್ಲೇ ತನ್ನ ತೀರ್ಪು ನೀಡಲು ನಿರ್ಧರಿಸಿದೆ.

sc-to-deliver-verdict-on-kashmir-petitions-shortly
ಕಾಶ್ಮೀರ ಅರ್ಜಿಗಳ ಕುರಿತು ಶೀಘ್ರದಲ್ಲೇ ತೀರ್ಪು ನೀಡಲಿದೆ ಸುಪ್ರೀಂ ಕೋರ್ಟ್​...

By

Published : Jan 10, 2020, 11:52 AM IST

ನವದೆಹಲಿ: 370 ನೇ ವಿಧೇಯಕದ ನಿಬಂಧನೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ಶೀಘ್ರದಲ್ಲೇ ತೀರ್ಪು ನೀಡಲು ನಿರ್ಧರಿಸಿದೆ.

ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ನ್ಯಾಯಪೀಠವು ಕಳೆದ ವರ್ಷ ನವೆಂಬರ್ 27 ರಂದು ತೀರ್ಪನ್ನು ಕಾಯ್ದಿರಿಸಿತ್ತು.

ನವೆಂಬರ್ 21 ರಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ನಿರ್ಬಂಧಗಳನ್ನು, 370 ನೇ ವಿಧೇಯಕ ರದ್ದುಪಡಿಸಿದ ನಂತರ ಕೇಂದ್ರವು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ಒಂದು ಜೀವವೂ ಹೋಗಿಲ್ಲ ಅಥವಾ ಒಂದು ಗುಂಡು ಸಹ ಹಾರಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಕಾಶ್ಮೀರ ಅರ್ಜಿಗಳ ಕುರಿತು ಶೀಘ್ರದಲ್ಲೇ ತೀರ್ಪು ನೀಡಲಿದೆ ಸುಪ್ರೀಂಕೋರ್ಟ್​...

ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಅನುರಾಧಾ ಭಾಸಿನ್ ಮತ್ತು ಕಣಿವೆಯಲ್ಲಿನ ನಿರ್ಬಂಧಗಳನ್ನು ಪ್ರಶ್ನಿಸುವ ಕೆಲವು ಮಧ್ಯವರ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸಿತ್ತು.

ಕೇಂದ್ರ ಸರ್ಕಾರವು ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ಹಿಂಸಾಚಾರವನ್ನು ಉಲ್ಲೇಖಿಸಿತ್ತು ಮತ್ತು ಕಳೆದ ಹಲವು ವರ್ಷಗಳಿಂದ ಭಯೋತ್ಪಾದಕರನ್ನು ಗಡಿಯಿಂದ ತಳ್ಳಲಾಗುತ್ತಿದೆ. ಸ್ಥಳೀಯ ಉಗ್ರರು ಮತ್ತು ಪ್ರತ್ಯೇಕತಾವಾದಿ ಸಂಘಟನೆಯು ಈ ಪ್ರದೇಶದಲ್ಲಿ ನಾಗರಿಕರನ್ನು ಸೆರೆಯಲ್ಲಿರಿಸಿಕೊಂಡಿತ್ತು. ಅದು "ಮೂರ್ಖತನ" ಎಂದಿತ್ತು.

ಹಿಂದಿನ ಜಮ್ಮ ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ರ ನಿಬಂಧನೆಗಳನ್ನು ಕೇಂದ್ರವು ಕಳೆದ ವರ್ಷ ಆಗಸ್ಟ್ 5 ರಂದು ರದ್ದುಗೊಳಿಸಿತ್ತು.

ABOUT THE AUTHOR

...view details