ನವದೆಹಲಿ/ಬೆಂಗಳೂರು:ಅನರ್ಹ ಶಾಸಕರ ಮ್ಯಾರಾಥಾನ್ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಿತು. ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದ್ದು, ವಾದ - ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠದಿಂದ ಪಕ್ಷಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ.
ಇಂದಿಗೆ ಎಲ್ಲ ವಾದ- ಪ್ರತಿವಾದಗಳು ಮುಕ್ತಾಯವಾಗಿದ್ದು, ಅಕ್ಟೋಬರ್ 22ರ ಬಳಿಕ ಅನರ್ಹತೆ ಶಾಸಕರ ಬಗ್ಗೆ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಅನರ್ಹ ಶಾಸಕರ ಪರ ಸಂದೀಪ್ ಪಾಟೀಲ್ ವಾದ ಮಂಡನೆ ಮಾಡಿದರು.
ಇದರಿಂದ ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ನಿಂದ ಶಾಕ್ ಸಿಕ್ಕಿದೆ. ಸುಪ್ರೀಂಕೋರ್ಟ್ನಿಂದ ಮುಂದಿನ ಆದೇಶ ಹೊರಬೀಳುವ ವರೆಗೂ ಈ ಕ್ಷೇತ್ರಗಳಿಗೆ ಚುನಾವಣೆ ನಡೆಯದಂತೆ ತ್ರಿಸದಸ್ಯ ಪೀಠ ತಿಳಿಸಿದೆ. ಹೀಗಾಗಿ ಎಲ್ಲ 17 ಶಾಸಕರ ಅನರ್ಹತೆ ಮುಂದುವರಿದಿದೆ.