ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಅಪ್ರಾಪ್ತರ ವಿರುದ್ಧ ಎಸ್ಸಿ,ಎಸ್ಟಿ ಪ್ರಕರಣ - ಅಪ್ರಾಪ್ತ ವಯಸ್ಕರ ವಿರುದ್ಧ ಎಸ್ಸಿ, ಎಸ್ಟಿ ಪ್ರಕರಣ

ಪ್ರತಾಕೋಟಾದ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಮೂರ್ತ ವಿಸರ್ಜನೆ ಮಾಡಿದ್ದ ಆರು ಮಕ್ಕಳ ಮೇಲೆ ಪೊಲೀಸರು ಎಸ್ಸಿ, ಎಸ್ಟಿ ಪ್ರಕರಣ ದಾಖಲಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಅಪ್ರಾಪ್ತ ವಯಸ್ಕರ ವಿರುದ್ಧ ಎಸ್ಸಿ, ಎಸ್ಟಿ ಪ್ರಕರಣ
SC, ST case against minors

By

Published : Nov 26, 2020, 3:49 PM IST

ಆಂಧ್ರಪ್ರದೇಶ: ಕರ್ನೂಲ್​ ಜಿಲ್ಲೆಯ ಪಗಿದ್ಯಾಲ್ ಮಂಡಲ್ ಮತ್ತು ಪ್ರತಾಕೋಟ ಗ್ರಾಮದಲ್ಲಿ ಪೊಲೀಸರು 10 ರಿಂದ 12 ವರ್ಷದ ಮಕ್ಕಳ ವಿರುದ್ಧ ಎಸ್ಸಿ, ಎಸ್ಟಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪ್ರತಾಕೋಟಾದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ನಲ್ಲಿ 6 ಮಕ್ಕಳು ಮೂತ್ರ ವಿಸರ್ಜಿಸುತ್ತಿದ್ದರು. ಇದನ್ನು ಗಮನಿಸಿದ ಸುರೇಖಾ ಮತ್ತು ರಮಣ ಎಂಬ ದಂಪತಿ ಮಕ್ಕಳನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ದಂಪತಿ ಕೈಗೆ ಕೆಲವು ಮಕ್ಕಳು ಸಿಕ್ಕಿ ಬಿದ್ದಿದ್ದಾರೆ. ಅವರನ್ನು ತಡೆದು ಯಾಕೆ ಹೇಗೆ ಟ್ಯಾಂಕ್​ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಕ್ಕಳು ಗ್ರಾಮಸ್ಥರ ಸೂಚನೆಯಂತೆ ಈ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ದಂಪತಿ ಮುಚುಮರಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮಸ್ಥರು ಮತ್ತು ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details