ನವದೆಹಲಿ: ಕೋವಿಡ್ -19 ನಿಂದಾಗಿ ಮುಚ್ಚಲ್ಪಟ್ಟಿರುವ ದೇಶದ ಎಲ್ಲಾ ದೇವಾಲಯಗಳನ್ನು ತೆರೆಯುವ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಕೋವಿಡ್ ಭೀತಿಗೆ ದೇವಾಲಯಗಳು ಬಂದ್; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಕೊರೊನಾ ವೈರಸ್ ಹರಡುವ ಭೀತಿಯಿಂದ ಮುಚ್ಚಿರುವ ದೇವಸ್ಥಾನಗಳನ್ನು ತೆರೆಯುವ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆ ನಡೆಸಿರುವ ಸಿಜೆಐ ಎಸ್‌ಎ ಬೊಬ್ಡೆ ಅವರಿದ್ದ ದ್ವಿಸದಸ್ಯ ಪೀಠ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಮಾಡಿದೆ.
ಕೋವಿಡ್ ಭೀತಿಗೆ ದೇವಾಲಯಗಳು ಬಂದ್; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಅಹಮದಾಬಾದ್ ಮೂಲದ ಗೀತಾರ್ಥ ಗಂಗಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠ, ಪ್ರತಿಕ್ರಿಯಿಸಿರುವಂತೆ ಕೇಂದ್ರ ಗೃಹ ಇಲಾಖೆಗೆ ಸೂಚನೆ ನೀಡಿದೆ.
ದೇವಸ್ಥಾನಗಳನ್ನು ತೆರೆಯಲು ಇರುವ ಸಾಧ್ಯತೆಗಳ ಬಗ್ಗೆ ನೋಟಿಸ್ ನೀಡಿದ್ದೇವೆ ಎಂದು ಪೀಠ ಹೇಳಿದೆ. ಟ್ರಸ್ಟ್ ಮತ್ತು ಧಾರ್ಮಿಕ ಸಂಸೋಧನಾ ಸಂಸ್ಥೆ ಸುರ್ಜೇಂದು ಶಂಕರ್ ದಾಸ್ ಎಂಬ ವಕೀಲರ ಮೂಲಕ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿಯ ವಿಚಾರಣೆ ನಡೆಸಿದೆ.