ನವದೆಹಲಿ:ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ಈ ಮೂಲಕ ಅನರ್ಹರಿಗೆ ಹಿನ್ನಡೆ ಉಂಟಾಗಿದೆ.
ಅತೃಪ್ತರ ಭವಿಷ್ಯ ಅತಂತ್ರ... ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ಅನರ್ಹತೆಯನ್ನು ಪ್ರಶ್ನಿಸಿ 17 ಮಂದಿ ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್
ಅರ್ಜಿಯಲ್ಲಿ ತುರ್ತು ವಿಚಾರಣೆಯ ಅಗತ್ಯ ಕಾಣಿಸುತ್ತಿಲ್ಲ. ಅರ್ಜಿಗಳು ಸರದಿ ಪ್ರಕಾರವೇ ವಿಚಾರಣೆಗೆ ಬರಲಿದೆ ಎಂದು ಜಸ್ಟೀಸ್ ಎನ್.ವಿ.ರಮಣ ಹೇಳಿದ್ದು, ಅನರ್ಹ ಶಾಸಕರು ಇನ್ನುಷ್ಟು ದಿನ ಕಾಲದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ತಕ್ಷಣವೇ ವಜಾ ಮಾಡುವಂತೆ ಅನರ್ಹರು ಅರ್ಜಿ ಸಲ್ಲಿಸಿದ್ದರು.
ಜುಲೈ 25ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.