ನವದೆಹಲಿ:ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಂಧನವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಸಿಬಿಐ ಬಂಧನದಲ್ಲಿ ನೇರವಾಗಿ ಸುಪ್ರೀಂಗೆ ಜಾಮೀನಿಗಾಗಿ ಮನವಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಚಿದಂಬರಂಗೆ ಜಾಮೀನು ಅವಶ್ಯಕತೆ ಇದ್ದಲ್ಲಿ ಕೆಳಹಂತದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.
ಸಿಬಿಐ ಬಂಧನವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಮತ್ತೊಂದು ಅರ್ಜಿಯ ಇಂದಿನ ವಿಚಾರಣೆಗೆ ನಮೂದಾಗಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಎರಡೂ ಅರ್ಜಿಗಳಲ್ಲಿ ಚಿದಂಬರಂಗೆ ಭಾರಿ ಹಿನ್ನಡೆಯಾಗಿದೆ.