ಕರ್ನಾಟಕ

karnataka

ETV Bharat / bharat

10, 12ನೇ ತರಗತಿ ಸಿಬಿಎಸ್ಇ ಪರೀಕ್ಷೆ ರದ್ದುಗೊಳಿಸಲು ಸುಪ್ರೀಂ ಅನುಮತಿ

10 ಮತ್ತು 12ನೇ ತರಗತಿ ಸಿಬಿಎಸ್ಇ ಪರೀಕ್ಷೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ)ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

cancellation of class 10 and 12 exams
ಸಿಬಿಎಸ್ಇ ಪರೀಕ್ಷೆ ರದ್ದು

By

Published : Jun 26, 2020, 12:18 PM IST

ನವದೆಹಲಿ: ಜುಲೈ ಮೊದಲ ವಾರದಲ್ಲಿ ನಡೆಯಬೇಕಿದ್ದ 10 ಮತ್ತು 12ನೇ ತರಗತಿ ಸಿಬಿಎಸ್ಇ ಪರೀಕ್ಷೆಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್​ ಅನುಮತಿ ನೀಡಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 10 ಮತ್ತು 12ನೇ ತರಗತಿಯ ಪರೀಕ್ಷೆ ರದ್ದುಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಸಿಬಿಎಸ್ಇಗೆ ಕೋರ್ಟ್ ಸೂಚಿಸಿದೆ.

ಲಾಕ್​ಡೌನ್​ಗೂ ಮೊದಲೇ ಕೆಲ ವಿಷಯಗಳಿಗೆ ಪರೀಕ್ಷೆಗಳು ನಡೆದಿತ್ತು. ಕೋವಿಡ್​ ಭೀತಿಯಿಂದಾಗಿ ಉಳಿದ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ, ರದ್ದಾದ ಪತ್ರಿಕೆಗಳಿಗೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವ ಯೋಜನೆಯ ಪ್ರಸ್ತಾವನೆಯನ್ನು ಪರೀಕ್ಷಾ ಮಂಡಳಿಯು ನ್ಯಾಯಾಲಯದ ಮುಂದಿರಿಸಿತ್ತು.

ಇಂದು ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರ ನ್ಯಾಯಪೀಠವು ಪರೀಕ್ಷೆಗಳನ್ನು ರದ್ದುಗೊಳಿಸುವ ಬಗ್ಗೆ ಅಧಿಸೂಚನೆ ಹೊರಡಿಸಲು ಸಿಬಿಎಸ್ಇಗೆ ಅನುಮತಿ ನೀಡಿದೆ.

ABOUT THE AUTHOR

...view details