ಕರ್ನಾಟಕ

karnataka

ETV Bharat / bharat

ಮೊದಲ ಬಾರಿಗೆ ವೀಡಿಯೊ ಕಾನ್ಫರೆನ್ಸಿಂಗ್ ವಿಚ್ಛೇದನ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್​

ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಸಲ್ಲಿಸಲಾದ ಅರ್ಜಿಯನ್ನು ಉನ್ನತ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ಸಂವಿಧಾನದ 142 ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿರುವ ಘನ ನ್ಯಾಯಾಲಯವು ವಿವಾಹ ವಿಚ್ಛೇದನದ ಆದೇಶವನ್ನು ಅಂಗೀಕರಿಸಿತು.

By

Published : Jun 21, 2020, 3:54 PM IST

supreme court
ಸುಪ್ರೀಂ ಕೋರ್ಟ್​

ನವದೆಹಲಿ:ಮೊದಲ ಬಾರಿಗೆ ಎರಡೂ ಅರ್ಜಿದಾರರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಅರ್ಜಿಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.

ಅರ್ಜಿದಾರರ ವಿವಾಹವು ಮೇ 31, 2001 ರಂದು ನಡೆದಿತ್ತು. ಪರಸ್ಪರ ಒಪ್ಪಿಗೆಯಿಂದ ಇಬ್ಬರೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆ ಮೇಲೆ ಅರ್ಜಿ ಸಲ್ಲಿಸಿದ್ದು, ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕ ಸುಪ್ರೀಂ ಕೋರ್ಟ್​ ತೀರ್ಪು ಪ್ರಕಟಿಸಿದೆ ಎಂದು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ತಿಳಿಸಿದ್ದಾರೆ.

ನ್ಯಾಯಾಲಯವು ಸಂವಿಧಾನದ 142 ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿರುವ ಘನ ನ್ಯಾಯಾಲಯವು ವಿವಾಹ ವಿಚ್ಛೇದನದ ಆದೇಶವನ್ನು ಅಂಗೀಕರಿಸಿತು. ಅರ್ಜಿ ಸಲ್ಲಿರಿರುವ ಇಬ್ಬರಲ್ಲಿ ಪರಸ್ಪರರ ವಿರುದ್ಧದ ಯಾವುದೇ ಬಾಧ್ಯತೆಗಳನ್ನು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ABOUT THE AUTHOR

...view details