ಕರ್ನಾಟಕ

karnataka

ETV Bharat / bharat

'ಜೂಮ್' ಆ್ಯಪ್ ನಿಷೇಧ;  ಕೇಂದ್ರಕ್ಕೆ ಸುಪ್ರೀಂ ನೋಟಿಸ್ - 'ಜೂಮ್' ಆ್ಯಪ್ ನಿಷೇಧ

ಜೂಮ್ ಅಪ್ಲಿಕೇಶನ್ ಜನರ ಗೌಪ್ಯತೆ ಹಕ್ಕು ಉಲ್ಲಂಘಿಸುವುದರ ಜೊತೆಗೆ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಬಹುದು ಎಂದು ಆರೋಪಿಸಿ ಅರೆಕಾಲಿಕ ಶಿಕ್ಷಕ ಹರ್ಷ್ ಚುಗ್ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್
ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್

By

Published : May 22, 2020, 6:23 PM IST

ನವದೆಹಲಿ: ಸೂಕ್ತ ಶಾಸನ ಜಾರಿಗೆ ಬರುವವರೆಗೆ ಸಾರ್ವಜನಿಕರಿಂದ ಅಧಿಕೃತ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಜೂಮ್ ಅಪ್ಲಿಕೇಶನ್​ ಅನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌ಎ ಬೊಬ್ಡೆ ನೇತೃತ್ವದ ಸಾಂವಿಧಾನಿಕ ಪೀಠವು, ಈ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ತನ್ನ ಉತ್ತರವನ್ನು ನೋಂದಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಜೂಮ್ ಅಪ್ಲಿಕೇಶನ್ ಜನರ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುವುದರ ಜೊತೆಗೆ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಬಹುದು ಎಂದು ಆರೋಪಿಸಿ ಅರೆಕಾಲಿಕ ಶಿಕ್ಷಕ ಹರ್ಷ್ ಚುಗ್ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಲಾಕ್​​​ಡೌನ್ ಸಮಯದಲ್ಲಿ ಜೂಮ್ ಅಪ್ಲಿಕೇಶನ್‌ನ ಬಳಕೆಯಲ್ಲಿ ಹೆಚ್ಚಳವಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಜನರು ಅಪ್ಲಿಕೇಶನ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಚುಗ್ ತಮ್ಮ ಮನವಿಯಲ್ಲಿ ಗಮನ ಸೆಳೆದಿದ್ದಾರೆ. ಅಪ್ರಾಪ್ತ ಚಿತ್ರಗಳನ್ನು ವೀಕ್ಷಿಸಲು ಅಪ್ರಾಪ್ತ ವಯಸ್ಕರು ಇದನ್ನು ಬಳಸುತ್ತಿರುವುದರಿಂದ ಆನ್‌ಲೈನ್ ತರಗತಿಗಳ ಸಮಯದಲ್ಲಿ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಚುಗ್ ತಿಳಿಸಿದ್ದಾರೆ.

ಇದಲ್ಲದೇ, ಜೂಮ್‌ನ ಸುರಕ್ಷತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ಸಮಗ್ರ ತಾಂತ್ರಿಕ ಅಧ್ಯಯನವನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details