ಕರ್ನಾಟಕ

karnataka

ETV Bharat / bharat

ಶಾಹೀನ್ ಬಾಗ್‌ಗೆ ಮಧ್ಯಸ್ಥಿಕೆದಾರರ ಭೇಟಿ... ಸಿಎಎ ವಿರೋಧಿಗಳೊಂದಿಗೆ ಸಂವಾದ - ಶಾಹೀನ್ ಬಾಗ್‌ಗೆ ಮಧ್ಯಸ್ಥಿಕೆದಾರರ ಭೇಟಿ

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಮಧ್ಯಸ್ಥಿಕೆದಾರರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರು ಶಾಹೀನ್ ಬಾಗ್‌ನಲ್ಲಿ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರೊಂದಿಗೆ ಸಂವಾದ ನಡೆಸಿದರು.

SC interlocuters visit Shaheen Bagh
ಶಾಹೀನ್ ಬಾಗ್‌ಗೆ ಮಧ್ಯಸ್ಥಿಕೆದಾರರ ಭೇಟಿ

By

Published : Mar 4, 2020, 9:25 AM IST

ನವದೆಹಲಿ: ಸುಪ್ರೀಂ ಕೋರ್ಟ್ ನೇಮಕ ಮಾಡಿದ ಮಧ್ಯಸ್ಥಿಕೆದಾರರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರು ಶಾಹೀನ್ ಬಾಗ್‌ನಲ್ಲಿ ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರೊಂದಿಗೆ ಸಂವಾದ ನಡೆಸಿದರು.

ಫೆ.17 ರಂದು, ಮಾಜಿ ಸಿಐಸಿ ವಜಾಹತ್ ಹಬೀಬುಲ್ಲಾ ಅವರಲ್ಲದೆ ಹಿರಿಯ ವಕೀಲರಾದ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರನ್ನು ಶಾಹೀನ್ ಬಾಗ್ ಪ್ರದೇಶದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು.

ಫೆ.24 ರಂದು ಸಂವಾದಕರು ತಮ್ಮ ವರದಿಗಳನ್ನು ಸುಪ್ರೀಂ ಕೋರ್ಟ್​ಗೆ ಮೊಹರಿನಲ್ಲಿ ಸಲ್ಲಿಸಿದ್ದರು. ಕಳೆದ ವರ್ಷ ಡಿಸೆಂಬರ್​ನಿಂದ ದೆಹಲಿಯ ಶಾಹೀನ್‌ನಲ್ಲಿ ಸಾವಿರಾರು ಜನರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದಾರೆ ಎನ್ನಲಾಗ್ತಿದೆ. ಕಾಳಿಂದಿ ಕುಂಜ್ ಬಳಿಯ ಶಾಹೀನ್ ಬಾಗ್‌ನಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಮತ್ತು ಇತರರಿಗೆ ಸೂಕ್ತ ನಿರ್ದೇಶನಗಳನ್ನು ಕೋರಿ ನಂದ್ ಕಿಶೋರ್ ಗರ್ಗ್ ಮತ್ತು ಅಮಿತ್ ಸಾಹ್ನಿ ಅವರ ಪರ ವಕೀಲ ಶಶಾಂಕ್ ದಿಯೋ ಸುಧಿ ಮೂಲಕ ಪಿಐಎಲ್ ಸಲ್ಲಿಸಲಾಗಿದೆ. 2019ರ ಸಿಎಎ ವಿರುದ್ಧ ದೆಹಲಿಯಿಂದ ನೋಯ್ಡಾಕ್ಕೆ ಸಂಪರ್ಕಿಸುವ ರಸ್ತೆ ತಡೆದು ಶಾಹೀನ್ ಬಾಗ್‌ನಲ್ಲಿನ ಜನರು ಅಕ್ರಮವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳದ ಅಡಚಣೆಗೆ ಕಾರಣವಾಗುವ ಪ್ರತಿಭಟನೆ/ಆಂದೋಲನವನ್ನು ನಡೆಸಲು ಸಂಪೂರ್ಣ ನಿರ್ಬಂಧಗಳಿಗೆ ಸಂಬಂಧಿಸಿದ ವಿವರವಾದ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹಾಕಲು ಅರ್ಜಿದಾರರು, ಯೂನಿಯನ್ ಆಫ್ ಇಂಡಿಯಾ (ಯುಒಐ) ಸೇರಿದಂತೆ ಪ್ರತಿವಾದಿಗಳಿಗೆ ಸೂಕ್ತ ನಿರ್ದೇಶನವನ್ನು ಕೋರಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಾ. 23 ರಂದು ವಿಚಾರಣೆ ನಡೆಸಲಿದೆ.

ABOUT THE AUTHOR

...view details