ನವದೆಹಲಿ:ಅಂತರ್ಜಾತಿ ವಿವಾಹವಾಗಿದ್ದ ಜೈಪುರ ಮೂಲದ ನವ ದಂಪತಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ. ಅವರಿಗೆ ರಕ್ಷಣೆ ನೀಡಿ ಎಂದು ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಫೆ.28ರಂದು ಮದುವೆಯಾದ ಈ ದಂಪತಿಗೆ ಯುವತಿಯ ಕುಟುಂಬದ ಕಡೆಯಿಂದ ಬೆದರಿಕೆಯಿದೆ. ತಮ್ಮ ಜೀವಕ್ಕೆ ಅಪಾಯವಿದೆ. ತಮಗೆ ರಕ್ಷಣೆ ನೀಡಿ ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಂದ ನಮಗೆ ರಕ್ಷಣೆ ಕೊಡಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.