ನವದೆಹಲಿ:ದೇಶಕ್ಕೆ 'ಇಂಡಿಯಾ' ಹೆಸರನ್ನು ತೆಗೆದುಹಾಕಿ 'ಭಾರತ' ಅಥವಾ 'ಹಿಂದೂಸ್ತಾನ್' ಎಂದು ಮರು ನಾಮಕರಣ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಅಲ್ಲದೇ ಈ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲಿ ಎಂದು ತಿಳಿಸಿದೆ.
'ಇಂಡಿಯಾ' ಬದಲಿಗೆ 'ಭಾರತ'; ಈ ಬಗ್ಗೆ ಕೇಂದ್ರವೇ ನಿರ್ಧರಿಸಲಿ ಎಂದ ಸುಪ್ರೀಂ - ಭಾರತ ಮರುನಾಮಕರಣ
ದೇಶದ ಅಧಿಕೃತ ಹೆಸರನ್ನು ಬದಲಿಸುವ ಕೆಲಸ ಸುಪ್ರೀಂಕೋರ್ಟ್ನದ್ದಲ್ಲ. ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಮುಂದಿನ ಹೆಜ್ಜೆ ಇಡುವಂತೆ ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಅಂತಿಮ ನಿರ್ಧಾರವನ್ನು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಬಿಟ್ಟಿದೆ.
ದೇಶಕ್ಕೆ ಹೆಸರನ್ನು ಮರುನಾಮಕರಣ ಮಾಡುವ ವಿಚಾರವಾಗಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ಘನ ನ್ಯಾಯಾಲಯ, ಅರ್ಜಿದಾರರಿಗೆ ತನ್ನ ಅರ್ಜಿಯ ಪ್ರತಿಯನ್ನು ಸರ್ಕಾರದ ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸುವಂತೆ ನಿರ್ದೇಶನ ನೀಡಿದೆ. ದೇಶದ ಅಧಿಕೃತ ಹೆಸರನ್ನು ಬದಲಿಸುವ ಕೆಲಸ ಸುಪ್ರೀಂ ಕೋರ್ಟ್ನದ್ದಲ್ಲ. ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಮುಂದಿನ ಹೆಜ್ಜೆ ಇಡುವಂತೆ ಕೋರ್ಟ್ ಹೇಳಿದೆ. ಹೀಗಾಗಿ ಅಂತಿಮ ನಿರ್ಧಾರವನ್ನು ಸರ್ಕಾರಕ್ಕೆ ಬಿಟ್ಟಿದೆ.
ಇಂಗ್ಲಿಷ್ ಭಾಷೆಯ ಹೆಸರನ್ನು ತೆಗೆದುಹಾಕುವುದು ಸಾಂಕೇತಿಕವಾಗಿ ಕಂಡು ಬಂದರೂ, ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.