ಕರ್ನಾಟಕ

karnataka

ETV Bharat / bharat

ಆರೋಗ್ಯ ರಕ್ಷಣೆ ಕ್ಷೇತ್ರ ರಾಷ್ಟ್ರೀಕರಣ ಬೇಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ದೇಶದ ಆರೋಗ್ಯ ರಕ್ಷಣಾ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿಹಾಕಿದೆ. ದಾರಿ ತಪ್ಪಿಸುವ ಆದೇಶ ನೀಡುವಂತೆ ನ್ಯಾಯಾಲಯವನ್ನು ಕೋರುವಂತಿಲ್ಲ ಎಂದು ಅರ್ಜಿದಾರರಿಗೆ ನ್ಯಾಯಾಲಯ ಚಾಟಿ ಬೀಸಿತು.

SC dismisses plea seeking nationalisation of healthcare sector
SC dismisses plea seeking nationalisation of healthcare sector

By

Published : Apr 13, 2020, 7:38 PM IST

ಹೊಸದಿಲ್ಲಿ: ಕೊರೊನಾ ವೈರಸ್​ ಸಂಕಷ್ಟದ ಹಿನ್ನೆಲೆಯಲ್ಲಿ ದೇಶದ ಆರೋಗ್ಯ ರಕ್ಷಣಾ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿಹಾಕಿದೆ. ಈ ಕುರಿತು ವಕೀಲ ಅಮಿತ್ ದ್ವಿವೇದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್​ ಭೂಷಣ್ ನೇತೃತ್ವದ ಸುಪ್ರೀಂಕೋರ್ಟ್​ ಪೀಠ ತಿರಸ್ಕರಿಸಿದೆ.

ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, "ನ್ಯಾಯಾಲಯವು ಸರಕಾರಗಳಿಗೆ ಇಂಥ ಆದೇಶ ಮಾಡುವಂತೆ ಕೇಳುವಂತಿಲ್ಲ. ಆಸ್ಪತ್ರೆಗಳ ರಾಷ್ಟ್ರೀಕರಣ ಮಾಡುವಂತೆ ಆದೇಶ ನೀಡಲು ಸಾಧ್ಯವಿಲ್ಲ. ಅಗತ್ಯವಿರುವೆಡೆ ಸರಕಾರ ಈಗಾಗಲೇ ಕೆಲ ಆಸ್ಪತ್ರೆಗಳನ್ನು ವಶಕ್ಕೆ ಪಡೆದುಕೊಂಡಿದೆ." ಎಂದರು.

ದಾರಿ ತಪ್ಪಿಸುವ ಆದೇಶ ನೀಡುವಂತೆ ನ್ಯಾಯಾಲಯಕ್ಕೆ ನೀವು ಕೋರುವಂತಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿದ ನ್ಯಾಯಮೂರ್ತಿ ಭೂಷಣ್, ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಕೋವಿಡ್​-19 ಸೋಂಕಿತರ ಚಿಕಿತ್ಸೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ ಎಂದರು.

ABOUT THE AUTHOR

...view details