ನವದೆಹಲಿ: ದೆಹಲಿಯ 140 ಕಿ.ಮೀ. ಉದ್ದದ ರೈಲ್ವೆ ಹಳಿಗಳ ಬಳಿ ಇರುವ 48,000 ಕೊಳಗೇರಿಗಳನ್ನು ಮೂರು ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ.
ರೈಲು ಹಳಿಗಳುದ್ದಕ್ಕೂ ಇರುವ 48,000 ಸ್ಲಮ್ಗಳ ತೆರವುಗೊಳಿಸಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಆದೇಶ - ನ್ಯಾ.ಅರುಣ್ ಮಿಶ್ರಾ
ರೈಲ್ವೆ ಹಳಿಗಳ ಬಳಿ ಇರುವ 48,000 ಕೊಳಗೇರಿಗಳನ್ನು ಮೂರು ತಿಂಗಳೊಳಗೆ ತೆರವುಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಹಂತ ಹಂತವಾಗಿ ಸ್ಲಮ್ಗಳನ್ನು ತೆರವುಗೊಳಿಸಬೇಕು ಹಾಗೂ ಈ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಇರುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೇ ಈ ಸಂಬಂಧ ಯಾವುದೇ ನ್ಯಾಯಾಲಯವು ತಡೆಯಾಜ್ಞೆಯಾಗಲಿ, ಮಧ್ಯಂತರ ಆದೇಶವಾಗಲಿ ನೀಡುವಂತಿಲ್ಲ ಎಂದು ಸೂಚಿಸಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ನೀಡಿದ ವರದಿ ಕುರಿತ ವಿಚಾರಣೆ ನಡೆಸಿದ ನ್ಯಾ. ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ನ್ಯಾಯಪೀಠ, ಒಂದು ತಿಂಗಳೊಳಗಾಗಿ ಕೊಳಗೇರಿ ಪ್ರದೇಶಗಳಲ್ಲಿನ ತ್ಯಾಜ್ಯಗಳ ವಿಲೇವಾರಿ ಮಾಡುವಂತೆ ಹಾಗೂ ಮೂರು ತಿಂಗಳಲ್ಲಿ 48,000 ಸ್ಲಮ್ಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.