ಕರ್ನಾಟಕ

karnataka

By

Published : Apr 2, 2019, 1:59 PM IST

ETV Bharat / bharat

ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದ ಸುಪ್ರೀಂ.. ಹಾರ್ದಿಕ್ ಪಟೇಲ್ ಚುನಾವಣಾ ಕನಸು ಭಗ್ನ..!

ಪಾಟಿದಾರ್ ಹೋರಾಟದ ವೇಳೆ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್, ಗುಜರಾತ್ ಹೈಕೋರ್ಟ್​ ಮೊರೆ ಹೋಗಿದ್ದರು.

ಹಾರ್ದಿಕ್ ಪಟೇಲ್

ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಆಸೆ ಸಂಪೂರ್ಣ ಕಮರಿದೆ.

ಪಾಟಿದಾರ್ ಹೋರಾಟದ ವೇಳೆ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್, ಗುಜರಾತ್ ಹೈಕೋರ್ಟ್​ ಮೊರೆ ಹೋಗಿದ್ದರು. ಹಾರ್ದಿಕ್ ಅರ್ಜಿಯನ್ನು ಹೈಕೋರ್ಟ್​ ತಳ್ಳಿಹಾಕಿತ್ತು. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಬಹುತೇಕ ಕೊನೆಯಾಗಿತ್ತು.

ಸದ್ಯ ಈ ತೀರ್ಪನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್​ ತಕ್ಷಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿದೆ.

ಹಾರ್ದಿಕ್ ಪಟೇಲ್ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಗುಜರಾತ್​​ನ ಜಾಮ್​ನಗರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುವ ತಯಾರಿಯಲ್ಲಿದ್ದರು.

ABOUT THE AUTHOR

...view details