ಕರ್ನಾಟಕ

karnataka

ETV Bharat / bharat

ವಿಮಾನ ಟಿಕೆಟ್ ಕಾಯ್ದಿರಿಸಿದ್ದ‌ ಹಣ ವಾಪಸ್‌ ವಿಚಾರ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್ - ಡಿಜಿಸಿಎ

ಕೋವಿಡ್‌ ಲಾಕ್‌ಡೌನ್‌ ವೇಳೆ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದ ಹಣ ಸಂಪೂರ್ಣ ವಾಪಸ್‌ ನೀಡುವ ಸಂಬಂಧ ಸ್ಪಷ್ಟನೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ.

sc-asks-centre-to-reply-on-plea-seeking-refund-for-air-tickets
ವಿಮಾನ ಟಿಕೆಟ್ ಕಾಯ್ದಿರುಸುವಿಕೆ‌ ಹಣ ವಾಪಸ್‌ ವಿಚಾರ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್

By

Published : Sep 23, 2020, 3:58 PM IST

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿನ ವಿಮಾನಗಳ ಟಿಕೆಟ್‌ ಕಾಯ್ದಿರಿಸುವಿಕೆ ರದ್ದು ಮಾಡಿದ್ದರಿಂದ ಬುಕ್ಕಿಂಗ್‌ ಹಣ ಸಂಪೂರ್ಣವಾಗಿ ವಾಪಸ್‌ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ.

ಹಣ ವಾಪಸ್‌ ಮಾಡುವುದರಲ್ಲಿ ಕೆಲ ಅನುಮಾನಗಳಿವೆ. ಹೀಗಾಗಿ ಸ್ಪಷ್ಟತೆಗಾಗಿ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ.

ಏಜೆನ್ಸಿ ಅಥವಾ ನೇರವಾಗಿ ಡೊಮೆಸ್ಟಿಕ್‌ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದ ಎಲ್ಲಾ ಪ್ರಯಾಣಿಕರಿಗೂ ಬುಕ್ಕಿಂಗ್ ಹಣವನ್ನು ವಾಪಸ್‌ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಒಂದು ವೇಳೆ ಭಾರತದಲ್ಲೇ ಇರುವಂತವರು ಅಂತಾರಾಷ್ಟ್ರೀಯ ಪ್ರಯಾಣ ಮಾಡಲು ಟಿಕೆಟ್‌ ಬುಕ್ಕಿಂಗ್‌ ಮಾಡಿದ್ದರೆ ಅಂತವರ ಹಣವನ್ನು ಕೂಡ ಹಿಂತಿರುಗಿಸಲಾಗುವುದು ಎಂದು ಹೇಳಿತ್ತು.

ಮೇ 24ಕ್ಕೂ ಮೊದಲು ಟಿಕೆಟ್‌ ಬುಕ್ಕಿಂಗ್‌ ಮಾಡಿದವರ ಹಣ ಅವರ ಖಾತೆಗೆ ಮರಳಿಸಲಾಗಿದೆ. ಮೇ 24 ರ ಬಳಿಕ ಟಿಕೆಟ್‌ ಕಾಯ್ದಿರಿಸಿರುವ ಬಗ್ಗೆ ನಾಗರಿಯ ವಿಮಾನಯಾನ ಅವಶ್ಯಕತೆಗಳು (ಸಿಎಆರ್‌) ನಿರ್ಧಾರ ಮಾಡಲಿದೆ ಎಂದಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಟಿಕೆಟ್‌ ಕಾಯ್ದಿರಿಸಿರುವ ಎಲ್ಲಾ ಪ್ರಯಾಣಿಕರಿಗೆ ಬುಕ್ಕಿಂಗ್‌ ಹಣವನ್ನು ವಾಪಸ್​‌ ನೀಡಿರುವುದಾಗಿ ಇಂಡಿಗೋ ಸಂಸ್ಥೆ ಈಗಾಗಲೇ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ABOUT THE AUTHOR

...view details