ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಏರ್ ಇಂಡಿಯಾ ತನ್ನ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಕೇಂದ್ರದ ಸೀಟ್ ಬುಕ್ಕಿಂಗ್ನೊಂದಿಗೆ 10 ದಿನಗಳವರೆಗೆ ನಡೆಸಲು ಅನುಮತಿ ನೀಡಿತು. ನಂತರ ಬಾಂಬೆ ಹೈಕೋರ್ಟ್ ಆದೇಶದಂತೆ ಮಧ್ಯದ ಸೀಟ್ಗಳನ್ನು ಖಾಲಿ ಇಡಲು ನಿರ್ದೇಶಿಸುವಂತೆ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದರು.
ಮೇ 22 ರಂದು, ಬಾಂಬೆ ಹೈಕೋರ್ಟ್ ಏರ್ ಇಂಡಿಯಾಕ್ಕೆ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಖಾಲಿ ಜಾಗವನ್ನು ಖಾಲಿ ಇರುವಂತೆ ನಿರ್ದೇಶಿಸಿತ್ತು. ಏರ್ ಇಂಡಿಯಾದ ಪೈಲಟ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ, ಈ ಸಮಯದಲ್ಲಿ ವಿಮಾನಗಳಲ್ಲಿ ಸಾಮಾಜಿಕ ಅಂತರ ಪಾಲಿಸುವ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಾದ ಚಿತ್ರಗಳನ್ನು ಹೈಕೋರ್ಟ್‌ನಲ್ಲಿ ತೋರಿಸುವುದರ ಮೂಲಕ, ಎಲ್ಲ ಸೀಟುಗಳನ್ನು ಕಾಯ್ದಿರಿಸಲಾಗಿದೆ ಮತ್ತು ವಿಮಾನಗಳಲ್ಲಿನ ಮಧ್ಯದ ಆಸನಗಳನ್ನು ಖಾಲಿ ಇಡಲಾಗಿಲ್ಲ. ಇದರಿಂದ ಕೊರೊನಾ ವೈರಸ್ ಹರಡಲು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ತಮ್ಮ ಅರ್ಜಿಗಳ ತುರ್ತು ವಿಚಾರಣೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾ ಸುಪ್ರೀಂಕೋರ್ಟ್‌ಗೆ ತೆರಳಿದ್ದವು.
ಡಿಜಿಸಿಎ ಮಾರ್ಚ್ 23 ರ ಸುತ್ತೋಲೆಯಲ್ಲಿ ಸಾಮಾಜಿಕ ಅಂತರವನ್ನು ಜಾರಿಗೆ ತರಲು ವಿಮಾನಗಳಲ್ಲಿ ಮಧ್ಯದ ಸೀಟ್ಗಳನ್ನು ಖಾಲಿ ಇಡುವಂತೆ ಕೇಳಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸುತ್ತೋಲೆ ನಿಗದಿತ ವಾಣಿಜ್ಯ ವಿಮಾನಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ವಿದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನ್ವಯಿಸಲ್ಲ ಎಂದು ಎಸ್‌ಜಿ ತುಷಾರ್ ಮೆಹ್ತಾ ವಾದಿಸಿದರು.