ಕರ್ನಾಟಕ

karnataka

ಸಿಜೆಐ ನಿಂದನೆ ಪ್ರಕರಣ: ಪ್ರಶಾಂತ ಭೂಷಣ ವಿರುದ್ಧದ ವಿಚಾರಣೆ ಮುಂದೂಡಿಕೆ

By

Published : Jul 25, 2020, 9:19 AM IST

ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಆಗಸ್ಟ್ 4 ಕ್ಕೆ ಮುಂದೂಡಿದೆ.

SC
ಸುಪ್ರೀಂಕೋರ್ಟ್

ನವದೆಹಲಿ:ಹಿಂದಿನ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಆಗಸ್ಟ್ 4 ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು 2009 ರ ತಿರಸ್ಕಾರ ಅರ್ಜಿಯ ವಿಚಾರಣೆಯನ್ನ ಮುಂದೂಡಿದೆ. ಪ್ರಶಾಂತ್ ಭೂಷಣ್ ಪರ ಹಾಜರಾದ ಹಿರಿಯ ವಕೀಲ ಡಾ.ರಾಜೀವ್ ಧವನ್, ಈ ಪ್ರಕರಣವು 2009 ರ ವರ್ಷದ್ದಾಗಿದೆ ಮತ್ತು ಈ ವಿಷಯದಲ್ಲಿ ಕೊನೆಯ ವಿಚಾರಣೆಯನ್ನು 2013 ರಲ್ಲಿ ನಡೆಸಲಾಗಿದೆ ಎಂಬುದನ್ನ ಕೋರ್ಟ್​ ಗಮನಕ್ಕೆ ತಂದರು

"ಈ ಮೊದಲು ಪ್ರಶಾಂತ್​ ಭೂಷಣ್​ ಪರ ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಾದ ಮಾಡ್ತಿದ್ದರು. ಅವರ ನಿಧನದ ನಂತರ ನಾನು ಪ್ರಶಾಂತ್ ಭೂಷಣ್ ಪರ ವಾದ ಮಂಡನೆ ಮಾಡಲಿದ್ದೇನೆ ಎಂದು ಧವನ್ ಹೇಳಿದ್ದಾರೆ.

ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕಿದೆ. ನಮಗೆ ಈ ಸಂಬಂಧದ ದಾಖಲೆಗಳ ಅವಶ್ಯಕತೆ ಇದೆ. ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಬೇಕಾಗಿದೆ. ಇದಕ್ಕಾಗಿ ನಮಗೆ ಸಮಯಾವಕಾಶದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. ಧವನ್​ ಮನವಿ ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನ ಆಗಸ್ಟ್​ 4ಕ್ಕೆ ಮುಂದೂಡಿದೆ.

ABOUT THE AUTHOR

...view details