ಪಂಜಾಬ್ :ಜೂನ್ 16 ರಂದು ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದ 3 ಜವಾನರ ತಾಯಂದಿರ ಖಾತೆಗೆ ಎಸ್‌ಬಿಐ ಬ್ಯಾಂಕ್ ತಲಾ ₹30 ಲಕ್ಷ ಹಣ ಜಮಾ ಮಾಡಿದೆ.
SBI ಬ್ಯಾಂಕ್‌ನಿಂದ 3 ಹುತಾತ್ಮ ಸೈನಿಕರ ತಾಯಂದಿರ ಖಾತೆಗೆ ತಲಾ ₹30 ಲಕ್ಷ ಜಮಾ - Ramgarh Branch SBI Bank
ಎಸ್‌ಬಿಐ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಸೇನಾ ಸೈನಿಕರ ವೇತನ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ರೆ ಯಾವುದೇ ಅಪಘಾತದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬ್ಯಾಂಕ್ ₹30 ಲಕ್ಷ ಪರಿಹಾರದ ರೂಪದಲ್ಲಿ ನೀಡುತ್ತದೆ..

ಪಂಜಾಬ್ ರೆಜಿಮೆಂಟ್ ಸೆಂಟರ್ ರಾಮ್‌ಗಢ ಕ್ಯಾಂಟ್‌ನಲ್ಲಿ ತರಬೇತಿ ಪಡೆದಿದ್ದ 3 ಜವಾನರು ಜೂನ್ 16ರಂದು ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದರು. ಈ ಮೂವರು ಹುತಾತ್ಮ ಸೈನಿಕರ ಪ್ರಧಾನ ಕಚೇರಿ ರಾಮ್‌ಗಢದ ಪಂಜಾಬ್ ರೆಜಿಮೆಂಟ್ ಕೇಂದ್ರವಾಗಿತ್ತು. ಮೂವರಿಗೂ 2019ರಲ್ಲಿ ಪಿಆರ್‌ಸಿಯಲ್ಲಿ ತರಬೇತಿ ನೀಡಲಾಗಿತ್ತು. ಅವರ ಸಂಬಳದ ಬ್ಯಾಂಕ್ ಖಾತೆಯನ್ನು ರಾಮ್‌ಗಢದ ಎಸ್‌ಬಿಐನಲ್ಲಿ ತೆರೆಯಲಾಗಿತ್ತು.
ಎಸ್‌ಬಿಐ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಸೇನಾ ಸೈನಿಕರ ವೇತನ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ರೆ ಯಾವುದೇ ಅಪಘಾತದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬ್ಯಾಂಕ್ ₹30 ಲಕ್ಷ ಪರಿಹಾರದ ರೂಪದಲ್ಲಿ ನೀಡುತ್ತದೆ. ಅದರ ಪ್ರಕಾರ ಹುತಾತ್ಮ ಮೂವರು ಸೈನಿಕರ ಕುಟುಂಬಕ್ಕೆ ಹಣ ಸೇರಬೇಕು. ಸೈನಿಕರಿಗೆ ಮದುವೆಯಾಗದ ಕಾರಣ ಮೂವರು ಸೈನಿಕರ ತಾಯಂದಿರ ಬ್ಯಾಂಕ್ ಖಾತೆಗಳಿಗೆ ₹30 ಲಕ್ಷ ಹಣ ಜಮಾ ಮಾಡಿರುವುದಾಗಿ ಎಸ್‌ಬಿಐ ರಾಮ್‌ಗಢ ಶಾಖೆಯ ಮುಖ್ಯ ವ್ಯವಸ್ಥಾಪಕ ರಾಹುಲ್ ಕುಮಾರ್ ತಿಳಿಸಿದರು.