ಮಥುರಾ:ಮನೆ ಹಾಗೂ ತೋಟಗಾರಿಕೆಯಲ್ಲಿ ಹಸುಗಳು ಪಾಲನೆ-ಪೋಷಣೆ ಲಾಭದಾಯಕ ಎಂಬುದನ್ನು ಸರ್ಕಾರ ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಭಾರತದಲ್ಲಿ ಗೋ ಶಾಲೆ ನಡೆಸುತ್ತಿರುವ ಜರ್ಮನ್ ಮಹಿಳೆ ಪದ್ಮಶ್ರೀ ಸುದೇವಿ ಹೇಳಿದ್ದಾರೆ.
ಪದ್ಮಶ್ರಿ ಸುದೇವಿ ಮತ್ತು ನೀ ಫ್ರೆಡ್ರಿಕ್ ಐರೀನ್ ಬ್ರುಯಿನಿಂಗ್ ಅವರು ಮಥುರಾ ಜಿಲ್ಲೆಯ ರಾಧಾಕುಂದ್ನಲ್ಲಿ ರಾಧಾ-ಸುರಭಿ ಗೋ ಶಾಲೆ ನಡೆಸುತ್ತಿದ್ದಾರೆ. ಇಲ್ಲಿ 1,800ಕ್ಕೂ ಅಧಿಕ ಹಸುಗಳಿದ್ದು, ಇದರಲ್ಲಿ ವಯಸ್ಸಾದ, ಅನಾರೋಗ್ಯ ಪೀಡಿತ ಹಾಗೂ ಗಾಯಗೊಂಡ ಹಸುಗಳ ಆರೈಕೆ ಮಾಡುತ್ತಿದ್ದಾರೆ.