ಕರ್ನಾಟಕ

karnataka

ETV Bharat / bharat

ತೂತುಕುಡಿ ಲಾಕಪ್​ ಡೆತ್​ ಕೇಸ್: ಆರೋಪಿ ಕಾನ್ಸ್​ಟೇಬಲ್ ಮುತ್ತುರಾಜ್ ಬಂಧನ - ಕಾನ್ಸ್​ಟೇಬಲ್ ಮುತ್ತುರಾಜ್ ಆರೋಪಿ

ಬಂಧನಕ್ಕೆ ಹೆದರಿ ಅರಸಂಕುಲಂನ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕಾನ್ಸ್​ಟೇಬಲ್​ ಮುತ್ತುರಾಜ್​ನ್ನು ಪೊಲೀಸರು ಬಂಧಿಸಿದ್ದಾರೆ. ಸಕ್ರಿಯ ಹುಡುಕಾಟದ ಬಳಿಕ ಸಿಕ್ಕ ಆರೋಪಿಯನ್ನ ಟುಟಿಕೋರಿನ್​ನ ಜಿಲ್ಲಾ ಸಿಬಿಸಿಐಡಿ ಕಚೇರಿಗೆ ಕರೆತರಲಾಗಿದೆ.

muthuraj
ಮುತ್ತುರಾಜ್ ಬಂಧನ

By

Published : Jul 4, 2020, 9:50 AM IST

ತೂತುಕುಡಿ( ತಮಿಳುನಾಡು): ತೂತುಕುಡಿಯಲ್ಲಿ ತಂದೆ ಮಗನ ಲಾಕ್​ಅಪ್ ಡೆತ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂತಕುಲಂ ಪೊಲೀಸ್​ ಕಾನ್ಸ್​ಟೇಬಲ್ ಮುತ್ತುರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಾಂತಕುಲಂ ಕಾನ್ಸ್​ಟೇಬಲ್ ಮುತ್ತುರಾಜ್ ಬಂಧನ

ಪ್ರಕರಣದ ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ ಸಿಬಿಸಿಐಡಿ ಪೊಲೀಸರು ನಂತರ ಇನ್ನೋರ್ವ ಆರೊಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಕಾನ್ಸ್​ಟೇಬಲ್​ ಮುತ್ತುರಾಜ್ ಬಂಧನಕ್ಕೆ ಹೆದರಿ ಅರಸಂಕುಲಂನ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಸಕ್ರಿಯ ಹುಡುಕಾಟದ ಬಳಿಕ ಸಿಕ್ಕ ಆರೋಪಿ ಮುತ್ತುರಾಜ್​ನನ್ನು ಟುಟಿಕೋರಿನ್​ನ ಜಿಲ್ಲಾ ಸಿಬಿಸಿಐಡಿ ಕಚೇರಿಗೆ ಕರೆತರಲಾಗಿದೆ.

ಘಟನೆ ಕುರಿತು ಸಿಬಿಸಿಐಡಿ ಕಚೇರಿಯಲ್ಲಿ ಮುತ್ತುರಾಜ್​ನನ್ನು ವಿಚಾರಣೆಗೊಳಪಡಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details