ಚೆನ್ನೈ: ತಮಿಳುನಾಡಿಗೆ ಆಗಮಿಸಿರುವ ಶಶಿಕಲಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಸಲುವಾಗಿ ಶೀಘ್ರದಲ್ಲೇ ತಮ್ಮ ಬೆಂಬಲಿಗರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ ನಟ ರಜನಿಕಾಂತ್ ಅವರು ಶಶಿಕಲಾ ಅವರ ಆರೋಗ್ಯದ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದ್ದಾರೆ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಶಶಿಕಲಾಗೆ ಆತ್ಮೀಯ ಸ್ವಾಗತ ಕೋರಿದ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಧನ್ಯವಾದ ಸಲ್ಲಿಸಿದ್ದಾರೆ.
"ಭಾರತೀಯ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶಶಿಕಲಾ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ದಿನಕರನ್ ಟ್ವೀಟ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಆರ್.ಕೆ. ನಗರದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಶಶಿಕಲಾ ಅವರ ಬಗ್ಗೆಯೂ ಕಾನೂನು ಸಲಹೆ ಪಡೆಯಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿ: ತಪ್ಪಿಸಿಕೊಳ್ಳುವ ಭರದಲ್ಲಿ ಮಾಲೀಕನ ಕೈಗೆ ಮೊಬೈಲ್ ಕೊಟ್ಟು ಪರಾರಿಯಾದ ಕಳ್ಳ!
"ಎಐಎಡಿಎಂಕೆಯ ಬಹಳಷ್ಟು ಜನರು ನನ್ನೊಂದಿಗೆ ಮಾತನಾಡಿದ್ದಾರೆ. ನಾನು ಇದರ ಬಗ್ಗೆ ಬಹಿರಂಗವಾಗಿ ಹೇಳಲಾರೆ. ಎಐಎಡಿಎಂಕೆ ಮತ್ತು ಎಎಂಎಂಕೆ ಸದಸ್ಯರು ಶಶಿಕಲಾ ಅವರನ್ನು ಸ್ವಾಗತಿಸಿದ್ದಾರೆ. ನಟ ರಜನಿಕಾಂತ್ ಅವರು ಶಶಿಕಲಾ ಅವರ ಆರೋಗ್ಯದ ಬಗ್ಗೆ ದೂರವಾಣಿಯಲ್ಲಿ ವಿಚಾರಿಸಿದ್ದಾರೆ" ಎಂದು ಅವರು ಹೇಳಿದರು.
ಬೆಂಗಳೂರಿನಿಂದ 23 ಗಂಟೆಗಳ ಪ್ರಯಾಣದ ನಂತರ ಶಶಿಕಲಾ ಚೆನ್ನೈಗೆ ಬಂದರು. ದಿವಂಗತ ಜಯಲಲಿತಾ ಅವರ ಮಾಜಿ ಸಹಾಯಕಿ ಶೀಘ್ರದಲ್ಲೇ ಬೆಂಬಲಿಗರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಶಶಿಕಲಾ ಅವರ ಮುಂದಿನ ನಡೆ ತಮಿಳುನಾಡು ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವೀಶ್ಲೇಷಕರು ಹೇಳುತ್ತಾರೆ.