ಇಡೀ ಭಾರತವೇ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತದೆ. ಆದರೆ, ಅವರ ಹುಟ್ಟುಹಬ್ಬದ ದಿನಾಂಕದ ಬಗ್ಗೆಯೇ ಕೆಲವು ಸಂದೇಹಗಳಿವೆ.
ಪುತ್ರ ಸರ್ವೆಪಲ್ಲಿ ಗೋಪಾಲ್ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ. 1992ರಲ್ಲಿ ದೆಹಲಿಯ ಆಕ್ಸ್ಫರ್ಡ್ ಪ್ರಕಾಶನವು ಸರ್ವೆಪಲ್ಲಿ ಗೋಪಾಲ್ ಅವರು ಬರೆದಿರುವ 'ರಾಧಾ ಕೃಷ್ಣನ್ ಎ ಬಯೋಗ್ರಫಿ' ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 5 ರಾಧಾಕೃಷ್ಣನ್ ಹುಟ್ಟಹಬ್ಬವೇ ಅಲ್ವಂತೆ...! ಪುತ್ರ ಹೀಗೆ ಹೇಳಿದ್ಯಾಕೆ? - ಸೆಪ್ಟೆಂಬರ್ 5
ಭಾರತದಲ್ಲಿ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಿಕೊಳ್ಳುತ್ತಾ ಬರಲಾಗಿದೆ. ಆದರೆ ರಾಧಾಕೃಷ್ಣನ್ ಅವರ ಪುತ್ರ ಮಾತ್ರ ಸೆಪ್ಟೆಂಬರ್ 5, ತಮ್ಮ ತಂದೆ ಹುಟ್ಟಿದ ದಿನವಲ್ಲ ಎಂದು ಹೇಳಿದ್ದಾರೆ.
ರಾಧಾಕೃಷ್ಣನ್
ರಾಧಾಕೃಷ್ಣನ್ ಅವರ ಅಧಿಕೃತ ದಾಖಲೆಗಳ ಪ್ರಕಾರ ಹುಟ್ಟುಹಬ್ಬವು 1888 ಸೆಪ್ಟೆಂಬರ್ 5ರಂದು ಎಂದು ನಮೂದಿಸಲಾಗಿದೆ. ಆದರೆ ಖುದ್ದು ರಾಧಾಕೃಷ್ಣನ್ ಅವರೇ ತಾವು ಹುಟ್ಟಿದ್ದು 1887 ಸೆಪ್ಟೆಂಬರ್ 20 ಎಂದು ನಂಬಿದ್ದರು ಎಂದು ಪುತ್ರ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.