ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಅನಂತನಾಗ್ ಜಿಲ್ಲೆಯಲ್ಲಿ ನಡೆದ ಫೈರಿಂಗ್ ವೇಳೆ ಸರಪಂಚ್ವೊಬ್ಬರು ಸಾವನ್ನಪ್ಪಿದ್ದಾರೆ.
ಶ್ರೀನಗರ: ಉಗ್ರರ ಗುಂಡಿನ ದಾಳಿಯಲ್ಲಿ ಸರಪಂಚ್ ಸಾವು! - ಗುಂಡಿನ ದಾಳಿ
ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಉಗ್ರರ ದಾಳಿಗೆ ಸರಪಂಚ್ವೊಬ್ಬರು ಸಾವನ್ನಪ್ಪಿದ್ದಾರೆ.
ಲುಕ್ಭವನ್ ಗ್ರಾಮದ ಸರಪಂಚ್ ಆಗಿದ್ದ ಅಜಯ್ ಪಂಡಿತ್ ಭಾರ್ತಿ ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇಂದು ಬೆಳಗ್ಗೆಯಿಂದ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ನಿನ್ನೆ ಕೂಡ ಐವರು ಉಗ್ರರ ಹೆಡೆಮುರಿ ಕಟ್ಟಲಾಗಿತ್ತು.
ಇದರ ಮಧ್ಯೆ ಉಗ್ರರು ವಿವಿಧ ಪ್ರದೇಶಗಳಲ್ಲಿ ಬಾಲ ಬಿಚ್ಚುತ್ತಿದ್ದು, ಅವರಿಗೆ ಗುಂಡಿನ ರುಚಿ ತೂರಿಸಲಾಗುತ್ತಿದೆ. ಕಳೆದ 2 ವಾರಗಳಲ್ಲಿ 9 ಬೃಹತ್ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಆರು ಹಿರಿಯ ಕಮಾಂಡರ್‌ಗಳು ಸೇರಿದಂತೆ ಒಟ್ಟು 22 ಉಗ್ರರನ್ನು ಹೊಡೆದುರುಳಿಸಲಾಗಿದೆ.