ಪಾಲಿ(ರಾಜಸ್ಥಾನ):ರಾಜಸ್ಥಾನದ ಪಾಲಿ ಜಿಲ್ಲೆಯ ಧನ್ಲಾ ಪಂಚಾಯತ್‌ನ ಅಧ್ಯಕ್ಷೆಯಾಗಿ ಒಂದು ವರ್ಷ ಪೂರೈಸಿದ ನೆನಪಿಗಾಗಿ, ಪ್ರಮೋದ್ ಕನ್ವಾರ್ ಪ್ರಧಾನಿ ಸುರಕ್ಷಾ ಭೀಮಾ ಯೋಜನೆಯಡಿ 2 ಲಕ್ಷ ರೂ. ವಿಮೆಯನ್ನು ತಮ್ಮ ಸ್ವಂತ ಹಣದಿಂದ 275 ಮಹಿಳೆಯರಿಗೆ ಮಾಡಿಸಿಕೊಡಲು ಮುಂದಾಗಿದ್ದಾರೆ.
ಮಾಹಿತಿಯ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಯಾರಿಗೂ ಇಂತಹ ಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ನಾನೇ ಮುಂದೆ ನಿಂತು ಈ ನಿರ್ಧಾರ ಮಾಡಿದೆ ಎನ್ನುತ್ತಾರೆ ಅಧ್ಯಕ್ಷೆ.
18 - 70 ವರ್ಷ ವಯಸ್ಸಿನ ಕನಿಷ್ಠ 275 ಮಹಿಳೆಯರಿಗೆ ವಿಮಾ ರಕ್ಷಣೆಯನ್ನು ಈ ಮುಖಾಂತರ ನೀಡಲಾಗುವುದು. ಎಲ್ಲ ಮಹಿಳೆಯರ ವಿಮಾ ಪ್ರೀಮಿಯಂ ಅನ್ನು ನಾನೇ ಪಾವತಿಸುತ್ತೇನೆ ಎಂದು ಪ್ರಮೋದ್ಕನ್ವಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ್ ಮಂತ್ರಿ ಜೀವ ರಕ್ಷ ಯೋಜನೆ, ಪಲನ್ಹಾರ್ ಯೋಜನೆ, ಉಪಹಾರ್ ಸಹಯೋಗ ಯೋಜನೆ, ಪಿಂಚಣಿ ಯೋಜನೆ ಮತ್ತು ಇತರ ಕಲ್ಯಾಣ ಯೋಜನೆಗಳ ಬಗ್ಗೆ ಗ್ರಾಮ ಅಭಿವೃದ್ಧಿ ಅಧಿಕಾರಿ ಮುಲಾರಂ ಜಖರ್ ಅವರು ಪಂಚಾಯತ್‌ನಲ್ಲಿ ಮಹಿಳೆಯರಿಗೆ ಮಾಹಿತಿ ನೀಡಿದರು.