ಕರ್ನಾಟಕ

karnataka

By

Published : Oct 22, 2020, 6:02 AM IST

ETV Bharat / bharat

ಮಹತ್ವದ ಸ್ಥಾನ ಪಡೆದ ತಂಜಾವೂರಿನ ಸರಸ್ವತಿ ವೀಣೆ

ತಮಿಳುನಾಡಿನ ತಂಜಾವೂರಿನ ಸರಸ್ವತಿ ವೀಣೆಗೆ ಮಹತ್ವದ ಸ್ಥಾನವಿದೆ. ವಿಶೇಷವಾದ ಮರದ ಕೆತ್ತನೆಗಳಿಂದ ತಯಾರಾಗುವ ಈ ವೀಣೆಯನ್ನು ಅನನ್ಯವೆಂದು ಪರಿಗಣಿಸಲಾಗಿದೆ.

Saraswati Veena of Thanjavur
ಮಹತ್ವದ ಸ್ಥಾನ ಪಡೆದ ತಂಜಾವೂರಿನ ಸರಸ್ವತಿ ವೀಣೆ

ತಮಿಳುನಾಡು:ವೀಣೆಯ ಸ್ವರವು ಕೇಳುಗರನ್ನು ಮಂತ್ರಮುಗ್ಧರಾಗುವಂತೆ ಮಾಡುತ್ತವೆ. ಚಿಂತೆಗಳನ್ನೆಲ್ಲ ದೂರ ಮಾಡಿ ಮಧುರ ಸಂಗೀತದಲ್ಲಿ ಮುಳುಗಿಸಿ ಬಿಡುತ್ತದೆ. ಭಾರತದ ನಾನಾ ರಾಜ್ಯಗಳಲ್ಲಿ ವೀಣೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಆದರೆ ತಮಿಳುನಾಡಿನ ತಂಜಾವೂರಿನ ಸರಸ್ವತಿ ವೀಣೆಗೆ ಮಹತ್ವದ ಸ್ಥಾನವಿದೆ. ವಿಶೇಷವಾದ ಮರದ ಕೆತ್ತನೆಗಳಿಂದ ತಯಾರಾಗುವ ಈ ವೀಣೆಯನ್ನು ಅನನ್ಯವೆಂದು ಪರಿಗಣಿಸಲಾಗಿದೆ.

ಈ ಕಲಾತ್ಮಕತೆಯ ಅದ್ಭುತ ಸೂಕ್ಷ್ಮತೆಗಳ ಬಗ್ಗೆ ತಿಳಿಯಲು ನಮ್ಮ ಈಟಿವಿ ಭಾರತ ತಂಡ, ತಂಜಾವೂರಿನ ವೀಣಾ ತಯಾರಕರ ಬಳಿಗೆ ತೆರಳಿತ್ತು. ಒಂದು ಸಣ್ಣ ಕೋಣೆಯಲ್ಲಿ ಈ ವೀಣೆಗಳನ್ನು ವಿಶೇಷವಾದ ಹಲಸಿನ ಹಣ್ಣಿನ ಮರದ ಕಟ್ಟಿಗೆಯಿಂದ ಕೆತ್ತಲಾಗುತ್ತದೆ. ವೀಣೆಯ ಮೂರು ಪ್ರತ್ಯೇಕ ಭಾಗಗಳನ್ನು ತಯಾರಿಸಲಾಗುತ್ತದೆ. ವೀಣೆಯ ಮೂರು ಭಾಗಗಳಾದ ಮಡಕೆ, ಕಾಂಡ ಮತ್ತು ಮುಖವನ್ನು ಪ್ರತ್ಯೇಕವಾಗಿ ಒಂದೇ ಮರದ ತುಂಡುಗಳಲ್ಲಿ ತಯಾರಿಸಲಾಗುತ್ತದೆ.

ಮಹತ್ವದ ಸ್ಥಾನ ಪಡೆದ ತಂಜಾವೂರಿನ ಸರಸ್ವತಿ ವೀಣೆ

ಇವುಗಳು 'ಏಕಂತ ವೀಣಾ' ಎಂಬ ವಾದ್ಯದ ಸಮಕಾಲೀನ ವಿನ್ಯಾಸವಾಗಿದ್ದು, 52 ಇಂಚು ಉದ್ದ ಮತ್ತು 8 ಕಿಲೋ ಗ್ರಾಂ ತೂಕ ಇರುತ್ತವೆ. ವಿವಿಧ ಚಿತ್ತಾರದ ಕೆತ್ತನೆಗಳೊಂದಿಗೆ ವೀಣೆಗಳನ್ನು ಭವ್ಯವಾಗಿ ಕೆತ್ತಲಾಗುತ್ತದೆ. ಬಳಿಕ ವೀಣೆಯ ಮೂರು ಭಾಗಗಳನ್ನು ಒಟ್ಟಿಗೆ ಅಂಟಿಸಲಾಗುತ್ತದೆ.

ಇಂತಹದ್ದೊಂದು ವೀಣೆಯನ್ನು ನುಡಿಸೊದು ಸುಲಭದ ಮಾತಲ್ಲ. ಸುಮಾರು 24 ಮೆಟ್ಟಿಲುಗಳ ಸಂಗೀತದ ಲಯವನ್ನು ಹೊಂದಿರುವ ವೀಣೆಯನ್ನ ನುಡಿಸಲು ಸಾಕಷ್ಟು ವಿದ್ಯಾಪಾರಂಗತರಾಗಿರಬೇಕು. ಇಂತಹ ಪುಣ್ಯವಾದ ಕೆಲಸ ಮಾಡಲು ಇಂದು ಯುವಕರು ಮುಂದಾಗುತ್ತಿಲ್ಲ. ಹಾಗಾಗಿ ವೀಣಾ ತಯಾರಕರ ಸಂಖ್ಯೆಯು ಕಡಿಮೆಯಾಗುತ್ತಿದೆ.

ಕೊರೊನಾ ಬಿಕ್ಕಟ್ಟಿನಿಂದ ವೀಣೆಯ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕಾಲಕ್ಕೆ ತಕ್ಕಂತೆ ವೀಣೆಗಳ ವಿಭಿನ್ನ ವಿನ್ಯಾಸಗಳನ್ನು ಪರಿಚಯಿಸುತ್ತಿದ್ದರೂ ಸಹ ವ್ಯಾಪಾರವಿಲ್ಲ. ಈ ಬಡಪಾಯಿಗಳಿಗೆ ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ.

ABOUT THE AUTHOR

...view details