ನವದೆಹಲಿ: ಶಾರದಾ ಚಿಟ್ ಫಂಡ್ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಸಿಬಿಐ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಕೋಲ್ಕತಾದ ಶಾರದಾ ಚಿಟ್ ಫಂಡ್ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಲುಕ್ಔಟ್ ನೋಟಿಸ್ ಜಾರಿ ಮಾಡಿರುವ ಸಿಬಿಐ ಅವರು ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿದೆ.
ಕಳೆದ ಶುಕ್ರವಾರ ಕುಮಾರ್ ಅವರಿಗೆ ವಿಸ್ತರಿಸಿದ್ದ ಬಂಧನ ವಿನಾಯಿತಿ ಮುಕ್ತಾಯಗೊಂಡ ಹಿನ್ನೆಲೆ ಅವರಿಗೆ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಮೇ 17ರಂದು ಸುಪ್ರೀಂಕೋರ್ಟ್ ಸಿಬಿಐ ಹಾಗೂ ಪಶ್ಚಿಮ ಬಂಗಾಳ ಪೊಲೀಸರ ನಡುವೆ ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಉಂಟಾದ ಸಂಘರ್ಷಕ್ಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಗರಣ ಮೂಲಕ ಗ್ರಾಮೀಣ ಭಾಗದ ಜನರಿಂದ ಕೋಟ್ಯಂತರ ರೂ. ಲಪಟಾಯಿಸಿದ ಕುರಿತು ಗಂಭೀರವಾಗಿ ಪರಿಗಣಿಸಿತ್ತು.
2014ರಲ್ಲಿ ಸಿಬಿಐ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್ ಫಂಡ್ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್ನ ಸಂಸ್ಥಾಪಕ ಸುದೀಪತ್ ಸೇನ್ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.