ಕರ್ನಾಟಕ

karnataka

ETV Bharat / bharat

ಸಂಸತ್​ ಮೇಲಿನ ದಾಳಿ ಅರೋಪದಿಂದ ಖುಲಾಸೆಗೊಂಡಿದ್ದ ಗಿಲಾನಿ ಸಾವು! - ಸಂಸತ್​ ಮೇಲಿನ ದಾಳಿ ಅರೋಪಿ ಗಿಲಾನಿ ಸಾವು

2001 ರ ಸಂಸತ್ತಿನ ದಾಳಿ ಆರೋಪದಿಂದ ಖುಲಾಸೆಗೊಂಡಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್‌ಎಆರ್ ಗಿಲಾನಿ ಕೊನೆಯುಸಿರೆಳೆದಿದ್ದಾರೆ.

ಎಸ್‌ಎಆರ್ ಗಿಲಾನಿ

By

Published : Oct 24, 2019, 9:28 PM IST

ನವದೆಹಲಿ:ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್‌ಎಆರ್ ಗಿಲಾನಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

ಸಂಸತ್ ದಾಳಿಯ ರೂವಾರಿಯಾಗಿದ್ದ ಅಫ್ಜಲ್ ಗುರು ಮರಣದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ಭಾರತೀಯ ಪ್ರೆಸ್​ ಕ್ಲಬ್​ನಲ್ಲಿ ಆಯೋಜನೆ ಮಾಡಿದ್ದಕ್ಕಾಗಿ 2016 ರಲ್ಲಿ ಗಿಲಾನಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ, ಕಾಶ್ಮೀರದ ವಿಚಾರವನ್ನ ಮಾತ್ರ ಚರ್ಚೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಗಿಲಾನಿ ಹೇಳಿದ್ದರು.

2001 ರ ಸಂಸತ್ತಿನ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರು ಜೊತೆ ಭಾಗಿಯಾಗಿರುವ ಆರೋಪದಲ್ಲಿ ಗಿಲಾನಿಗೂ ಮರಣದಂಡನೆ ವಿಧಿಸಲಾಯಿತು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್​ 2003ರಲ್ಲಿ ಗಿಲಾನಿ ಅವರನ್ನ ಖುಲಾಸೆಗೊಳಿಸಿತ್ತು.

ABOUT THE AUTHOR

...view details