ನವದೆಹಲಿ: ಲೋಕಸಭೆ ಚುನಾವಣೆ ರಂಗು ಪಡೆಯುತ್ತಿದ್ದಂತೆ ರಾಜಕೀಯ ನಾಯಕರಿಂದ ಟೀಕಾಪ್ರಹಾರಗಳೂ ಹೆಚ್ಚುತ್ತಿವೆ. ಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್ ಸೇರಿರುವ ಸಂಬಂಧ ಬಿಜೆಪಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೀಡಾಗಿದೆ.
ಹರಿಯಾಣದ ನಟಿ, ನೃತ್ಯಗಾರ್ತಿ ಸಪ್ನ ಚೌಧರಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿತ್ತು. ಆದರೀಗ ಸ್ವತಃ ಸ್ವಪ್ನ ಇದನ್ನು ತಳ್ಳಿಹಾಕಿದ್ದಾರೆ. ಈ ಮಧ್ಯೆ ಇದನ್ನು ಟೀಕಿಸುವ ಭರದಲ್ಲಿ ಬಿಜೆಪಿ ಶಾಸಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿರುವಂತೆ, ಇಟಲಿಯಲ್ಲಿ ನೃತ್ಯಗಾರ್ತಿಯಾಗಿದ್ದ ಸೋನಿಯಾರನ್ನು, ರಾಜೀವ್ ಗಾಂಧಿ ಹೇಗೆ ತನ್ನವಳನ್ನಾಗಿ ಮಾಡಿಕೊಂಡರೋ ಅದೇ ಮಾರ್ಗದಲ್ಲಿ ರಾಹುಲ್ ಸಾಗಬೇಕು. ತಮ್ಮ ಕುಟುಂಬದ ಸಂಪ್ರದಾಯದಂತೆ ರಾಹುಲ್ ಮದುವೆಯಾಗಬೇಕು ಎಂದಿದ್ದಾರೆ.