ಸೂರತ್: ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆಗೆ ಪ್ರಧಾನ ಸ್ಥಾನ ನೀಡಲಾಗಿತ್ತು. ಆದರೆ, ಈಚೆಗಿನ ಸಂಸ್ಕೃತ ಭಾಷೆ ಬಳಕೆ ಕೇವಲ ಶೇ.1ರಷ್ಟು ಇಳಿಮುಖವಾಗಿದೆ.
ಸದ್ಯ ಸೂರತ್ನ ದಾವೂದಿ ಬೋಹ್ರಾಸ್ ಸಮುದಾಯದ ಸಹೋದರರಿಬ್ಬರು ಸಂಸ್ಕೃತ ಭಾಷೆಯ ಶ್ರೀಮಂತಿಕೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಯುವ ಮನಸ್ಸುಗಳಿಗೆ ಮುಟ್ಟಿಸಲು ವಿಶ್ವಾಸ ವೃತ್ತಾಂತ್ ಎಂಬ ಪತ್ರಿಕೆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಭಾರತದಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಈ ಪತ್ರಿಕೆ ಒಂದೇ ಆಗಿದೆ.
ಈ ಪತ್ರಿಕೆಯು 2011ರ ಏಪ್ರಿಲ್ 26ರಂದು ಆರಂಭಗೊಂಡಿದ್ದು, ವಿಶ್ರಮಿಸದೇ ಇಲ್ಲಿಯವರೆಗೆ ಮುನ್ನುಗ್ಗಿ ನಡೆಯುತ್ತಿದೆ. ಸೈಫೀ ಸಂಜೆಲಿವಾಲಾ ಮತ್ತು ಮುರ್ತಾಜಾ ಖಂಭಾತ್ವಾಲಾ ಈ ಸಂಸ್ಕೃತ ಪತ್ರಿಕೆಯ ಬಂಡಿಗೆ ನೊಗವಾಗಿದ್ದಾರೆ. ಹಿಂದೂ-ಮುಸ್ಲಿಮರ ಏಕತೆಗೆ ಸೇತುವೆಯಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಹಿಂದೂ ವೇದಗಳು, ಪುರಾಣಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಮೂಲಕ ನಮ್ಮ ಹಳೆಯ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.
ನಿತ್ಯ ಹತ್ತು ಹಲವು ಭಾಷೆಯಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಆದರೆ ಒಂದು ಸಂಸ್ಕೃತ ಪತ್ರಿಕೆ ಇದೆ ಎಂದು ಯಾರಿಗೂ ತಿಳಿದಿಲ್ಲ. ಅದು ಇಂದಿನವರೆಗೂ ಪ್ರಕಟಿಸುತ್ತಲೇ ಬಂದಿದೆ. ಸಂಸ್ಕೃತ ಭಾಷೆಗೆ ಆಕರ್ಷಣೆಗೊಂಡಿದ್ದೇನೆ. ಅದನ್ನು ಉತ್ತೇಜಿಸಲು ಬಯಸುತ್ತೇನೆ ಎಂದು ವ್ಯವಸ್ಥಾಪಕ ಸಂಪಾದಕ ಮುರ್ತುಜಾ ಈ ಟಿವಿ ಭಾರತ್ ಗೆ ತಿಳಿಸಿದರು.